Home Information 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಶಿರಸಿಯಲ್ಲಿ ಚದುರಂಗ ಸ್ಪರ್ಧೆ

1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಶಿರಸಿಯಲ್ಲಿ ಚದುರಂಗ ಸ್ಪರ್ಧೆ

SHARE

ಶಿರಸಿ : ಭಟ್ ಚೆಸ್ ಸ್ಕೂಲ್ ಇವರ ಆಶ್ರಯದಲ್ಲಿ ಜುಲೈ 8 ರಂದು 1 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗಾಗಿ ಚದುರಂಗ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಈ ಸ್ಪರ್ಧೆಯು ಶ್ರೀ ಮಾರಿಕಾಂಬಾ ಕಲ್ಯಾಣ ಮಂಟಪ (ಶ್ರೀ ಮಾರಿಕಾಂಬಾ ದೇವಸ್ಥಾನದ ಎದುರು) ದಲ್ಲಿ ನಡೆಯಲಿದ್ದು, ಇದರಲ್ಲಿ 1 ರಿಂದ 4ನೇ ತರಗತಿಯವರೆಗಿನ , 5 ರಿಂದ 7ನೇ ತರಗತಿಯ ವರೆಗಿನ ಹಾಗೂ 8 ರಿಂದ 10ನೇ ತರಗತಿಯ ಮೂರು ವಿಭಾಗಗಳಿದ್ದು, ಎಲ್ಲಾ ವಿಭಾಗಗಳಲ್ಲಿ 5 ಬಹುಮಾನಗಳಿರುತ್ತವೆ. ಈ ಸ್ಪರ್ಧೆಯು ಸ್ವಿಸ್ ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಯಾವುದೇ ಶಾಲೆಯ ಎಷ್ಟೇ ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದಾಗಿದೆ.

ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಚದುರಂಗದ ಪುಸ್ತಕ ಹಾಗೂ ಸರ್ಟಿಫಿಕೇಟನ್ನು ನೀಡಲಾಗುತ್ತದೆ. ಈ ಸ್ಪರ್ಧೆಯು ರವಿವಾರ ಮುಂಜಾನೆ 9-30 ಕ್ಕೆ ಪ್ರಾರಂಭವಾಗಲಿದ್ದು, ಭಾಗವಹಿಸುವ ವಿದ್ಯಾರ್ಥಿಗಳು ಸಮಯ ಮುಂಜಾನೆ 9-15 ರ ಒಳಗಾಗಿ ಸ್ಥಳದಲ್ಲಿ ಹಾಜರಿರಬೇಕೆಂದು ಕೇಳಿಕೊಳ್ಳಲಾಗಿದೆ.
ಹೆಚ್ಚಿನ ವಿವರಗಳಿಗಾಗಿ :ಅಂತರಾಷ್ಟ್ರೀಯ ಚೆಸ್ ತೀರ್ಪುಗಾರರಾದ ಶ್ರೀ ಆನಂದಸ್ವಾಮಿ : 8762456327 ಅಥವಾ ರಾಮಚಂದ್ರ ಭಟ್ಟ ಮಾತ್ನಳ್ಳಿ: 9481360128 ಇವರನ್ನು ಸಂಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.