Home Information ಬಾಲಕರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

ಬಾಲಕರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

SHARE

ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಭಟ್ಕಳ ತಾಲೂಕಿನಲ್ಲಿ ಹೊಸದಾಗಿ ಪ್ರಾರಂಭಿಸಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ 2018-19ನೇ ಸಾಲಿನಲ್ಲಿ ಪ್ರವೇಶ ಬಯಸುವ ಪಿ.ಯು.ಸಿ, ಡಿಗ್ರಿ, ಡಿಪ್ಲೋಮಾ, ಐ.ಟಿ.ಐ ಇತ್ಯಾದಿ ಕೋರ್ಸುಗಳನ್ನು ಓದುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ, ತೆಲಿರಾಮಜಿ ರಸ್ತೆ, ಇಂಡಿಯನ್ ಓವರಸಿಸ್ ಬ್ಯಾಂಕ್ ಮೇಲೆ, 2ನೇ ಮಹಡಿ, ಕಾರವಾರ ಹಾಗೂ ತಾಲೂಕಾ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಚೇರಿ, ಭಟ್ಕಳರವರಿಂದ ಉಚಿತವಾಗಿ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 20 ರ ಒಳಗಾಗಿ ಸಂಬಂಧ ಪಟ್ಟ ತಾಲೂಕಿನ ವಿಸ್ತರಣಾಧಿಕಾರಿಗಳ ಕಛೇರಿಗೆ ಸಲ್ಲಿಸತಕ್ಕದ್ದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.