Home Local ಕುಮಟಾ ಭಾಗಕ್ಕೆ ವಿಶೇಷ ಅನುದಾನ ನೀಡುವಂತೆ ವಿನಂತಿ ಸಲ್ಲಿಸಿದ ಪುರಸಭಾ ಅಧ್ಯಕ್ಷ ಮಧುಸೂಧನ ಶೇಟ್.

ಕುಮಟಾ ಭಾಗಕ್ಕೆ ವಿಶೇಷ ಅನುದಾನ ನೀಡುವಂತೆ ವಿನಂತಿ ಸಲ್ಲಿಸಿದ ಪುರಸಭಾ ಅಧ್ಯಕ್ಷ ಮಧುಸೂಧನ ಶೇಟ್.

SHARE

ಕುಮಟಾ :ಇತ್ತೀಚಿಗೆ ಕುಮಟಾ ಪುರಸಭೆ ಅಧ್ಯಕ್ಷರಾದ ಶ್ರೀ ಮಧುಸೂದನ ಶೇಟ್ ರವರು, ಶ್ರೀ ರಮೇಶ ಜಾರಕಿಹೊಳಿ, ಮಾನ್ಯ ಪೌರಾಡಳಿತ ಸಚಿವರು, ಕರ್ನಾಟಕ ಸರ್ಕಾರ ರವರನ್ನು ಬೆಳಗಾವಿಯಲ್ಲಿ ಭೇಟಿ ಮಾಡಿ ಕುಮಟಾ ಪಟ್ಟಣದ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗೆ 10 ಕೋಟಿ ವಿಶೇಷ ಅನುದಾನ ನೀಡುವಂತೆ ವಿನಂತಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಕುಮಟಾ – ಹೊನ್ನಾವರ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ದೀವಳ್ಳಿ ಘಟಕಕ್ಕೆ ವಿದ್ಯುತ್ ವ್ಯತ್ಯಯ ಉಂಟಾದಾಗ ನೆರವಿಗೆ ಬರುವ ಜನರೇಟರ್ ಒಂದನ್ನು ಮಂಜೂರು ಮಾಡಲು ಮನವಿ ಪತ್ರವನ್ನು ಸಲ್ಲಿಸಿದರು.

ಮಾನ್ಯ ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ. ಅವರಿಗೆ ಪುರಸಭೆ ಅಧ್ಯಕ್ಷರು ಕುಮಟಾ ಕೌನ್ಸಿಲ್ ಪರವಾಗಿ ಧನ್ಯವಾದ ಸಲ್ಲಿಸಿರುತ್ತಾರೆ.