Home Local ಕುಮಟಾದಲ್ಲಿ ಭೀಕರ ಅಪಘಾತ: ನುಜ್ಜುಗುಜ್ಜಾಯ್ತು ಗೋಕರ್ಣ ಬಸ್!

ಕುಮಟಾದಲ್ಲಿ ಭೀಕರ ಅಪಘಾತ: ನುಜ್ಜುಗುಜ್ಜಾಯ್ತು ಗೋಕರ್ಣ ಬಸ್!

SHARE

ಕುಮಟಾ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಸಾರಿಗೆ ಬಸ್‌ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕುಮಟಾದಿಂದ‌ ಗೋಕರ್ಣಕ್ಕೆ ಹೊರಟ ಬಸ್ ಅಪಘಾತವಾಗಿದ್ದು ಭೀಕರ ಸ್ಥಿತಿ ಇಲ್ಲಿ ಕೆಲಕಾಲ ನಿರ್ಮಾಣವಾಗಿತ್ತು.

ಹೆದ್ದಾರಿಯಲ್ಲಿನ ಪಾಂಡುರಂಗ ಹೋಟೆಲ್‌ನ ಸಮೀಪ ಈ ಅಪಘಾತ ನಡೆದಿದ್ದು, ಸ್ಥಳೀಯರು, ಹೆಸ್ಕಾಂ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಬೃಹತ್ ಕಂಬವೊಂದನ್ನು ಕೊಂಡೊಯ್ಯುತ್ತಿದ್ದ ಲಾರಿಯು ಡಿಕ್ಕಿಯಾಗಿರುವುದರಿಂದ ಬಸ್‌ನಲ್ಲಿ ಒಂದು ಬದಿಯಲ್ಲಿ ಕುಳಿತಿದ್ದ ಎಲ್ಲರಿಗೂ ಗಾಯಗೊಂಡು, ಐವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಹಲವರಿಗೆ ಗಂಭೀರ ಗಾಯಗಳಾಗಿದ್ದು, ಕುಮಟಾ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿಯವರು ಸರಕಾರಿ ಆಸ್ಪತ್ರೆಗೆ ತಕ್ಷಣ ಹಾಜರಾಗಿ ಸೂಕ್ತ ಕ್ರಮಕ್ಕೆ ವ್ಯವಸ್ಥೆ ಮಾಡುತ್ತಿದ್ದರು.