Home Local ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಸಂಪನ್ನವಾಯ್ತು ಪತ್ರಿಕಾ ದಿನಾಚರಣೆ.

ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಸಂಪನ್ನವಾಯ್ತು ಪತ್ರಿಕಾ ದಿನಾಚರಣೆ.

SHARE

ಕುಮಟಾ : ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಹೆಗಡೆಯ ಶ್ರೀ ಶಾಂತಿಕಾಂಬಾ ಪ್ರೌಢ ಶಾಲೆಯ ಸಭಾಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಪೀರ್ಣಿಮಾ ಎನ್.ಪೈ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ವಸ್ತುನಿಷ್ಠ ಹಾಗೂ ಸತ್ಯನಿಷ್ಠ ವರದಿಗಳನ್ನು ನೀಡುವುದು ಹಾಗೂ ಜನರ ಭಾವನೆಗಳನ್ನು ರಕ್ಷಣೆ ಮಾಡುವ ಗುರುತರವಾದ ಜವಾಬ್ದಾರಿ ಪತ್ರಕರ್ತರಮೇಲಿದೆ. ಇಂದು ಮಾಧ್ಯಮ ಹಾಗೂ ನ್ಯಾಯಾಲಯಗಳ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕಾಗಿದೆ ಪತ್ರಿಕಾ ಮಾಧ್ಯಮಗಳು ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವ ಜತೆಗೆ ಪ್ರಜಾಪ್ರಭುತ್ವವನ್ನು ಕಾಯುವ ಕಾರ್ಯ ಮಾಡುತ್ತದೆ ಪ್ರಜಾಪ್ರಭುತ್ವದ ರಕ್ಷರಾಗಿ ನ್ಯಾಯಾಂಗದ ಜತೆಗೆ ಪತ್ರಿಕಾರಂಗ ಕಾರ್ಯನಿರ್ವಹಿಸುತ್ತದೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳು ವಿಶ್ವಾಸಾರ್ಹವಾಗಿರುವುದರಿಂದ ವಸ್ತುನಿಷ್ಠ ವರದಿಗಳನ್ನು ಮಾಡುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಹಿಲ್ಲೂರ್ ಪಿ.ಯು.ಕಾಲೇಜ್ ಉಪನ್ಯಾಸಕ ನಾಗರಾಜ ಎನ್.ಹೆಗಡೆ ಉಪನ್ಯಾಸನೀಡಿ, ಮಾಧ್ಯಮ ಪ್ರಜಾಪ್ರಭುತ್ವಕ್ಕೆ ಬದ್ರಬುನಾದಿಯಾಗಿದ್ದು, ಮಾನವೀಯತೆಯ ನೆಲೆಯಲ್ಲಿ ವಸ್ತುನಿಷ್ಠ ವರದಿಯ ಹೊಣೆ ಪತ್ರಕರ್ತರ ಮೇಲಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುಮಟಾ ಎಪಿಎಂಸಿ ಅಧ್ಯಕ್ಷ ರಾಮನಾಥ ಶಾನಭಾಗ, ಶಾಲೆಯ ಎಸ್‍ಇ ಕಮೀಟಿಯ ಚೇರಮನ್ ಗಜಾನನ ಎಸ್.ಗುನಗಾ ಮಾತನಾಡಿ, ಸಾಮಾಜಿಕ ಸ್ವಾಥ್ಯ ಕಾಪಾಡುವಲ್ಲಿ ಪತ್ರಕರ್ತರ ಕಾರ್ಯ ಪ್ರಮುಖವಾಗಿದೆ ಎಂದರು.

ಕಸಾಪ ಅಧ್ಯಕ್ಷ ಶ್ರೀಧರ ಗೌಡ ಉಪ್ಪಿನ ಗಣಪತಿ ಮಾತನಾಡಿ, ಪತ್ರಕರ್ತರು ನಿತ್ಯ ಸಾಹಿತಿಗಳು. ಅವರ ಕಾರ್ಯ ಚಟುವಟಿಕೆಗಾಗಿ ಪತ್ರಿಕಾ ಭವನದ ಅಗತ್ಯವಿದೆ. ಅವರೆಲ್ಲರೂ ಸಮ್ಮತಿಸಿದರೆ ಕನ್ನಡ ಭವನದಲ್ಲಿ ಪತ್ರಿಕಾ ಭವನವನ್ನು ನಿರ್ಮಿಸಲು ಸರ್ಕಾರವನ್ನು ಒತ್ತಾಯಿಸಬಹುದು ಎಂದರು.
ಶಾಲೆಯ ಪ್ರಭಾರಿ ಮುಖ್ಯಾಧ್ಯಾಪಕ ಎಸ್.ಬಿ.ನಾಯ್ಕ ಪಾಲ್ಗೊಂಡಿದ್ದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‍ಇ ಕಮೀಟಿಯ ಅಧ್ಯಕ್ಷ ಪುರುಷೋತ್ತಮ್ ಶಾನಭಾಗ ಹೆಗಡೆಕರ್ ಮಾತನಾಡಿ, ಪತ್ರಕರ್ತರು ನಿರ್ಭಯವಾಗಿ ಕರ್ತವ್ಯ ನಿರ್ವಹಿಸಲು ನ್ಯಾಯಾಂಗ ವ್ಯವಸ್ಥೆ ಸಹಾಯಕಾರಿಯಾಗಿರಬೇಕು ಎಂದರು.

ರಾಷ್ಟ್ರದ ಪ್ರಗತಿಯಲ್ಲಿ ಮಾಧ್ಯಮಗಳ ಪಾತ್ರ ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಅರ್ಚನಾ ಎಂ.ಹೆಗಡೆ, ವಿಘ್ನೇಶ ನಾಯ್ಕ ಮತ್ತು ಕಾವ್ಯಾ ಪಟಗಾರ ಅವರಿಗೆ ಮೊದಲ ಮೂರು ಬಹುಮಾನಗಳನ್ನು ಕ್ರಮವಾಗಿ ವಿತರಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಜಿ.ಭಟ್ ಸ್ವಾಗತಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಅನ್ಸಾರ್ ಶೇಖ್ ಪ್ರಾಸ್ತಾವಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಮರನಾಥ ಭಟ್ ನಾಡಗೀತೆ ಹಾಡಿದರು. ಪತ್ರಕರ್ತರಾದ ಚರಣರಾಜ್ ನಾಯ್ಕ ನಿರೂಪಿಸಿದರು. ಎಂ.ಜಿ.ನಾಯ್ಕ ವಂದಿಸಿದರು. ಜಯದೇವ ಬಳಗಂಡಿ ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು. ರಾಘವೇಂದ್ರ ದಿವಾಕರ್, ಜಿ.ಡಿ.ಶಾನಭಾಗ ಮತ್ತು ಸಹಕರಿಸಿದ್ದರು. ಶಾಲಾ ಶಿಕ್ಷಕ ವೃಂದ ಮತ್ತು ಹೆಗಡೆ ಗೆಳೆಯರ ಬಳಗ ಸಹಕರಿಸಿದರು.