Home Local ಮಗುಚಿಬಿದ್ದ ಅಡಿಕೆ ಲಾರಿ: ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ ವ್ಯಕ್ತಿ: ಅಗ್ರಹಾರದಲ್ಲಿ ನಡೆಯಿತು ಹೃದಯ ಕಲಕುವ ಘಟನೆ.

ಮಗುಚಿಬಿದ್ದ ಅಡಿಕೆ ಲಾರಿ: ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ ವ್ಯಕ್ತಿ: ಅಗ್ರಹಾರದಲ್ಲಿ ನಡೆಯಿತು ಹೃದಯ ಕಲಕುವ ಘಟನೆ.

SHARE

ಹೊನ್ನಾವರ: ಲಾರಿ ಕೆಳಗೆ ಸಿಲುಕಿ ಸೈಕಲ್ ಸವಾರ ಸಾವನ್ನಪ್ಪಿದ ಘಟನೆ ಹೊನ್ನಾವರ ತಾಲೂಕಿನ ಅಗ್ರಹಾರ ಸಮೀಪ ನಡೆದಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಮತನನ್ನು ಮಂಜುನಾಥ ಮಡಿವಾಳ ಬರಗದ್ದೆ ನಿವಾಸಿ ಎಂದು ಗುರುತಿಸಲಾಗಿದೆ.

ಮಂಗಳೂರಿನಿಂದ ಅಹಮದಾಬಾದ್ ಗೆ ಅಡಿಕೆ ತುಂಬಿಕೊಂಡು ತೆರಳುತ್ತಿದ್ದ ಲಾರಿಯೊಂದು ಅಗ್ರಹಾರ ಬಳಿ ಉರುಳಿ ಬಿದ್ದು ಸೈಕಲ್ ಸವಾರ ಮೃತಪಟ್ಟಿದ್ದಾನೆ.

ಘಟನೆಯಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಲಾರಿಯ ಅಡಿಯಲ್ಲಿ ಸೈಕಲ್ ಸವಾರನೊಬ್ಬ ಸಿಲುಕಿ ಮೃತಪಟ್ಟಿದ್ದಾನೆಂದು ವ್ಯಕ್ತಪಡಿಸಿದೆ. ಲಾರಿಯಲ್ಲಿನ ಅಡಿಕೆಯನ್ನ ಖಾಲಿ ಮಾಡಿ, ಲಾರಿಯನ್ನು ಮೇಲಕ್ಕೆತ್ತಿದ ಬಳಿಕ ಸೈಕಲ್ ಸವಾರನನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.