Home Local ಉತ್ತರ‌ ಕನ್ನಡಿಗರಿಗೆ ಕಹಿ ಸುದ್ದಿ: ನಕ್ಸಲರ ಕೃತ್ಯಕ್ಕೆ ಪ್ರಾಣತೆತ್ತ ಕಾರವಾರದ ಯೋಧ

ಉತ್ತರ‌ ಕನ್ನಡಿಗರಿಗೆ ಕಹಿ ಸುದ್ದಿ: ನಕ್ಸಲರ ಕೃತ್ಯಕ್ಕೆ ಪ್ರಾಣತೆತ್ತ ಕಾರವಾರದ ಯೋಧ

SHARE

ಕಾರವಾರ:ಉತ್ತರ ಕನ್ನಡಿಗರಿಗೆ ಈ ಸುದ್ದಿ ನಿಜವಾಗಿಯೂ ನೋವು ಉಂಟುಮಾಡುವಂತದ್ದು. ಚತ್ತೀಸ್​ಗಢದಲ್ಲಿ ನಕ್ಸಲರು ನಡೆಸಿದ್ದ ಅಟ್ಟಹಾಸಕ್ಕೆ ಕಾರವಾರ ಜಿಲ್ಲೆಯ ಯೋಧ ವಿಜಯಾನಂದ ಸುರೇಶ್​​​ ನಾಯ್ಕ್ ಹುತಾತ್ಮರಾಗಿದ್ದಾರೆ.

ದೇಶ ಕಾಯುವ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯಾನಂದ ಸುರೇಶ್​​​ ನಾಯ್ಕ್ ಸಾವು ಜಿಲ್ಲೆಗೆ ಆಘಾತ ತಂದಿದೆ.

ಚತ್ತೀಸ್​ಗಢದ ಕಂಕರ್ ಜಿಲ್ಲೆಯ ಬಸ್ತರ್ ವಲಯದಲ್ಲಿ ನಿನ್ನೆ ನಕ್ಸಲರು ನೆಲ ಬಾಂಬ್ ಸ್ಫೋಟಿಸಿದ್ದರು. ಮಾವೋವಾದಿಗಳ ಕೃತ್ಯಕ್ಕೆ ಇಬ್ಬರು ಬಿಎಸ್​ಎಫ್ ಯೋಧರು ಹುತಾತ್ಮರಾಗಿದ್ದರು. ಮೃತ ಇಬ್ಬರಲ್ಲಿ ಕಾರವಾರದ ಯೋಧ ವಿಜಯಾನಂದ ಸುರೇಶ್​​​ ನಾಯ್ಕ್​ ಕೂಡ ಒಬ್ಬರಾಗಿದ್ದಾರೆ.

ಇವರು ವಿಜಯಾನಂದ 2014ರಲ್ಲಿ ಬಿಎಸ್​​ಎಫ್​​ ಯೋಧರಾಗಿ ಸೇನೆಗೆ ಸೇರಿಕೊಂಡಿದ್ದರು. ಯೋಧ ವಿಜಯಾನಂದ, ನಿವೃತ್ತ ರೆವಿನ್ಯೂ ಇನ್ಸ್​​ಪೆಕ್ಟರ್​​​ ಸುರೇಶ್​​ ನಾಯ್ಕ್​​ ಅವರ ಪುತ್ರ ಎಂದು ವರದಿಯಾಗಿದೆ.