Home Local ಕರಾಟೆ ಶಿಬಿರಕ್ಕೆ ಚಾಲನೆ

ಕರಾಟೆ ಶಿಬಿರಕ್ಕೆ ಚಾಲನೆ

SHARE

ಕುಮಟಾ: ಆತ್ಮ ರಕ್ಷಣೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕರಾಟೆ ಕಲಿಕೆ ನೆರವಾಗುತ್ತದೆ ಎಂದು ಕ್ರೀಡಾ ಪೋಷಕ, ರಾಜ್ಯ ಕಬಡ್ಡಿ ಅಸೋಶಿಯೇಶನ್ ಅಧ್ಯಕ್ಷ ಸೂರಜ್ ನಾಯ್ಕ ಸೋನಿ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಕ್ರೀಡಾ ಮತ್ತು ಸಾಹಸ ಸಂಘದಡಿ ಹಮ್ಮಿಕೊಂಡ ಕರಾಟೆ ಕಲಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮದೇ ಕದನಕಲೆ ಕರಾಟೆಯನ್ನು ನಾವು ಉಳಿಸಿಕೊಳ್ಳಲು ಹೆಣಗಾಡಬೇಕಾಗಿದೆ ಎಂದು ಪುರಸಭಾ ಅಧ್ಯಕ್ಷ ಸಂತೋಷ ನಾಯ್ಕ ಇಂದು ಮತ್ತೆ ಶಾಲೆಗಳಲ್ಲಿ ಕಲಿಕೆಗೆ ಆಸ್ಪದ ನೀಡುತ್ತಿರುವುದಕ್ಕೆ ಸಂತೋಷಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಶಾಲಾವಧಿಯ ನಂತರ ವಾರದಲ್ಲಿ ಮೂರು ಅವಧಿ ಆಸಕ್ತ ಮಕ್ಕಳಿಗೆ ಕರಾಟೆ ಕಲಿಕೆಗೆ ಅನುವು ಮಾಡಿಕೊಡಲಾಗಿದೆ ಎಂದರು. ಕರಾಟೆಯ ವಿವಿಧ ಹಂತಗಳಲ್ಲಿ ಪ್ರಾವಿಣ್ಯತೆ ಪಡೆದ ದಯಾನಂದ ನಾಯ್ಕ, ರಾಜೇಶ ಪಟಗಾರ ತರಬೇತಿಯನ್ನು ಉಚಿತವಾಗಿ ನಡೆಸಿಕೊಡುತ್ತಿರುವುದು ಶ್ಲಾಘನೀಯವಾದುದಾಗಿದೆ. ಮೊದಲಿಗೆ ಶ್ರೀಲಕ್ಷ್ಮೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಅನಿಲ್ ರೊಡ್ರಗೀಸ್ ಸ್ವಾಗತಿಸಿದರೆ ಶಿಕ್ಷಕ ವಿಷ್ಣು ಭಟ್ಟ ನಿರೂಪಿಸಿದರು. ಕಿರಣ ಪ್ರಭು ವಂದಿಸಿದರು. ಹೊನ್ನಾವರದ ಮಾರ್ಥೋಮಾ ಮತ್ತು ನ್ಯೂ ಇಂಗ್ಲೀಷ ಶಾಲಾ ಕರಾಟೆ ಪಟುಗಳು ನಡೆಸಿಕೊಟ್ಟ ಪ್ರದರ್ಶನ ಸಾಹಸಮಯವಾಗಿದ್ದು ಸ್ಫೂರ್ತಿದಾಯಕವಾಗಿತ್ತು.