Home Local ಚಿತ್ರಗಿ ಪ್ರೌಢಶಾಲೆಯಲ್ಲಿ ಉಚಿತ ರಕ್ತ ಗುಂಪು ಪರೀಕ್ಷಾ ಶಿಬಿರ

ಚಿತ್ರಗಿ ಪ್ರೌಢಶಾಲೆಯಲ್ಲಿ ಉಚಿತ ರಕ್ತ ಗುಂಪು ಪರೀಕ್ಷಾ ಶಿಬಿರ

SHARE

ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ನೂತನವಾಗಿ ಪ್ರವೇಶ ಪಡೆದ ಎಂಟನೆಯ ತರಗತಿ ವಿದ್ಯಾರ್ಥಿಗಳಿಗೆ ಉಚಿತ ರಕ್ತ ಪರೀಕ್ಷೆ ಮಾಡಿ ರಕ್ತದ ಗುಂಪನ್ನು ನೀಡಲಾಯಿತು.

ಉತ್ತರ ಕನ್ನಡ ಜಿಲ್ಲಾ ಬ್ಲಡ್ ಬ್ಯಾಂಕ್ ಮತ್ತು ಕಸ್ತೂರಬಾ ಇಕೋ ಕ್ಲಬ್ ನೆರವಿನೊಂದಿಗೆ ಈ ಶಿಬಿರವನ್ನು ನಡೆಸಲಾಯಿತು. ಯು.ಕೆ.ಬ್ಲಡ್ ಬ್ಯಾಂಕ್‍ನ ರಕ್ತ ಪರೀಕ್ಷಕ ಬಾಲಕೃಷ್ಣ ಗಾವಡಿ ನೇತೃತ್ವವಹಿಸಿದ್ದರು.

ಮುಖ್ಯಾಧ್ಯಾಪಕ ಎನ್.ಆರ್.ಗಜು ಮಾತನಾಡಿ, ನಮ್ಮ ನಮ್ಮ ರಕ್ತ ಗುಂಪು ಯಾವ ಪ್ರಕಾರದ್ದು ಎಂಬ ತಿಳುವಳಿಕೆ ಇದ್ದಾಗ ಮಾತ್ರ, ತುರ್ತು ಸಂದರ್ಭದಲ್ಲಿ ರಕ್ತ ದಾನ ಅಥವಾ ಸ್ವೀಕಾರ ಮಾಡಬಹುದಲ್ಲದೇ ಮಕ್ಕಳ ಗುರುತಿನ ಚೀಟಿಯಲ್ಲಿ ಬ್ಲಡ್ ಗುಂಪು ನಮೂದಿತವಾದಾಗ ತ್ವರಿತ ಸೇವೆಗೆ ಸಹಾಯಕವಾಗುತ್ತದೆ ಎಂದರು.

ಶಿಕ್ಷಕರಾದ ಎಲ್.ಎನ್.ಅಂಬಿಗ, ಇಕೋ ಕ್ಲಬ್ ಸಂಚಾಲಕ ಕಿರಣ ಪ್ರಭು,ಶಿಕ್ಷಕಿ ಪವಿತ್ರಾ ಭಂಡಾರಿ ಮೊದಲಾದವರಿದ್ದರು.