Home Local ಮಳೆಯ ಅವಾಂತರ : ಬೈಕ್‌ ಮೇಲೆ ಮರ ಬಿದ್ದು ಬಲಿಯಾದ ತಂದೆ ಮಗ

ಮಳೆಯ ಅವಾಂತರ : ಬೈಕ್‌ ಮೇಲೆ ಮರ ಬಿದ್ದು ಬಲಿಯಾದ ತಂದೆ ಮಗ

SHARE

ಕಾರವಾರ:- ಬೈಕ್ ಚಾಲಕರ ಮೇಲೆ ಮರ ಬಿದ್ದು ತಂದೆ ಮಗ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಇಡಗುಂದಿಯಲ್ಲಿ ನಡೆದಿದೆ.

ಅಂಕೋಲಾ ತಾಲೂಕಿನ ಕನಕನಹಳ್ಳಿ ಗ್ರಾಮದ ಸುಭಾಶ್ ಚಿಪ್ಕರ್(೫೦) ಹಾಗೂ ನಾಗರಾಜ್ ಸಲಗಾವ್ಕರ್(೨೫) ಮೃತ ದುರ್ದೈವಿಗಳು.

ಬೈಕ್ ಚಲಾಯಿಸಿಕೊಂಡು ಯಲ್ಲಾಪುರದ ಕಡೆಯಿಂದ ಅಂಕೋಲಕ್ಕೆ ಹೋಗುತಿದ್ದಾಗ ಬಾರಿ ಗಾಳಿ ಮಳೆಗೆ ರಸ್ತೆಯಮೇಲೆ ಬೃಹದಾಕಾರದ ಮರ ಬಿದ್ದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.