Home Information ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರ ತರಬೇತಿ ಆರಂಭ

ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರ ತರಬೇತಿ ಆರಂಭ

SHARE

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ (ರಿ.) ಇವರು ಕಳೆದ 32 ವರುಷಗಳಿಂದ ನಡೆಸಿಕೊಂಡು ಬಂದಿರುವ ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರದ 2018-19 ನೇ ಸಾಲಿನ ಯಕ್ಷಗಾನ ತರಬೇತಿಯು ಇದೇ ಬರುವ ಸೋಮವಾರ ದಿ: 16/07/2018 ರಿಂದ ಆರಂಭವಾಗಲಿದೆ. ಬೆಳಿಗ್ಗೆ 9 ಗಂಟೆಗೆ ಕಲಾಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ತಿಮ್ಮಣ್ಣ ಯಾಜಿ, ಮಣ್ಣಿಗೆ ಇವರು ಕಲಾಕೇಂದ್ರಕ್ಕೆ ಚಾಲನೆ ನೀಡಲಿದ್ದಾರೆ. ಇವರ ಜೊತೆ ಶ್ರೀ ಕೆ.ಜಿ. ಹೆಗಡೆ ಅಣ್ಣುಹಿತ್ತಲು, ಶ್ರೀ ಗಣೇಶ ಶಾಸ್ತ್ರಿ ನಿಲೇಕೇರಿ ಹಾಗೂ ಶಿಕ್ಷಕರು ಹಾಜರಿರಲಿದ್ದಾರೆ.

ಗುರುಕುಲ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಹಾಗೂ ವಿದ್ಯಾರ್ಥಿವೇತನವನ್ನು ನೀಡಲಾಗುವುದು.
ಗುರುಕುಲದಲ್ಲಿ ಕಲಿಯುವ ವಿದ್ಯಾರ್ಥಿಗಳ ಹೊರತಾಗಿ ಅನ್ಯ ಯಕ್ಷಗಾನಾಸಕ್ತರಿಗೆ ಕೂಡ ತರಬೇತಿ ಪಡೆಯಲು ಅವಕಾಶವಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಮತ್ತು ರಜಾದಿನಗಳಲ್ಲಿ ತರಬೇತಿ ಪಡೆಯಬಹುದು. ಸುತ್ತಮುತ್ತಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೂಡಾ ಯಕ್ಷಗಾನ ಶಿಕ್ಷಣವನ್ನು ನೀಡಲಾಗುವುದು.
ಆಸಕ್ತರು ಸೋಮವಾರದಿಂದ ತರಬೇತಿಗೆ ಬರಬಹುದು.

ಸಂಪರ್ಕಿಸಿ: ಕೆರೆಮನೆ ಶಿವಾನಂದ ಹೆಗಡೆ
ನಿರ್ದೇಶಕರು,
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.)
ಅಂಚೆ: ಗುಣವಂತೆ, ತಾ: ಹೊನ್ನಾವರ, ಉ. ಕ. – 581 348
ದೂರವಾಣಿ: 08387-234188, ಮೊ. 9483617988, 7760793669