Home Article ಗುರುಗಳು ಶಿಷ್ಯರಮೇಲೆ ತೋರುವ ಕೃಪಾದೃಷ್ಟಿಯ ಕುರಿತು ಶ್ರೀಧರರು ಹೇಳಿದ ಮಾತು!

ಗುರುಗಳು ಶಿಷ್ಯರಮೇಲೆ ತೋರುವ ಕೃಪಾದೃಷ್ಟಿಯ ಕುರಿತು ಶ್ರೀಧರರು ಹೇಳಿದ ಮಾತು!

SHARE

ಯಾವರೀತಿ ಸೊಂಟದ ಮೇಲಿನ ಸಣ್ಣ ಮಗುವಿಗೆ, ತನ್ನ ತಾಯಿಯ ಪ್ರೇಮದ ಬೆಲೆಕಟ್ಟಲು ಶಕ್ಯವಿಲ್ಲವೋ, ಅದೇ ರೀತಿಯಲ್ಲಿ, ಗುರುವಿನ ಹೃದಯದಲ್ಲಿ, ತಮ್ಮ ಮೇಲೆ ಅದೆಷ್ಟು ವಾತ್ಸಲ್ಯ ಮತ್ತು ಹಿತದೃಷ್ಟಿ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಶಿಷ್ಯರೂ ಅಸಮರ್ಥರಿರುತ್ತಾರೆ.

(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರ)

— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

                            || ಶ್ರೀರಾಮ ಸಮರ್ಥ ||

ಮಗಳೇ!

ನಾನು ನಿಮ್ಮ ಸುಧಾರಣೆ ಮಾಡುವದಕ್ಕಾಗಿ ಸ್ವಲ್ಪ ಸಿಟ್ಟಿನಿಂದ ತುಸು ಜೋರಾಗಿ ಮಾತನಾಡುತ್ತಿದ್ದರೂ, ಅದು ನಿಮ್ಮ ಮೇಲಿನ ಪ್ರೇಮದಿಂದಲೇ ಮಾಡಿದ ಉಪದೇಶವು.

ಮಕ್ಕಳೇ! ನಿಮ್ಮೆಲ್ಲರ ಮೇಲೆ ಗುರುದೇವರ ಎಷ್ಟು ಪ್ರೇಮವಿದೆ, ಎಷ್ಟು ಹಿತದೃಷ್ಟಿ ಇದೆ, ಎಂದರೆ, ಅದಕ್ಕೆ ಯಾವುದೇ ಮಿತಿಯಿಲ್ಲ. ಯಾವರೀತಿ ಸೊಂಟದ ಮೇಲಿನ ಸಣ್ಣ ಮಗುವಿಗೆ, ತನ್ನ ತಾಯಿಯ ಪ್ರೇಮದ ಬೆಲೆಕಟ್ಟಲು ಶಕ್ಯವಿಲ್ಲವೋ, ಅದೇ ರೀತಿಯಲ್ಲಿ, ಗುರುವಿನ ಹೃದಯದಲ್ಲಿ ತಮ್ಮ ಮೇಲೆ ಅದೆಷ್ಟು ವಾತ್ಸಲ್ಯ ಮತ್ತು ಹಿತದೃಷ್ಟಿ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಶಿಷ್ಯರೂ ಅಸಮರ್ಥರಿರುತ್ತಾರೆ. ಗುರುದೇವನು ಅತ್ಯಂತ ಕಠೋರ ರೀತಿಯಿಂದ ಮಾಡಿದ ತಪಸ್ಯವನ್ನು ಸಂಪೂರ್ಣವಾಗಿ ತಮ್ಮ ಶಿಷ್ಯರ ಪ್ರೀತ್ಯರ್ಥ ಸಮರ್ಪಣ ಮಾಡುತ್ತಾರೆ ಮತ್ತು ಶಿಷ್ಯರ ಇಹಲೋಕ ಮತ್ತು ಪರಲೋಕವೆರಡೂ ಪರಿಪೂರ್ಣವಾಗಲು, ಹಾಗೇ ಯಾವಾಗಲೂ ಆನಂದರೂಪದಲ್ಲಿಡಲು, ಗುರು ಸ್ವತದ ಸರ್ವತೋಪರಿ ಬಲಿದಾನ ಮಾಡುತ್ತಾರೆ. ನೀವೆಲ್ಲ ಬಾಲಬುದ್ಧಿಯವರಾಗಿದ್ದರಿಂದ ಗುರು ಹೃದಯದ ಮರ್ಮ ಅದೆಂತು ಅರಿಯುವಿರಿ? ಮಗಳೇ! ಶ್ರೀಗುರುದೇವ ನಿಮ್ಮೆಲ್ಲರ ಮಂಗಲಮಯ ಸ್ವರೂಪವಾಗಿದ್ದಾರೆ. ಗುರುದೇವ ತಮ್ಮ ಶಿಷ್ಯರಿಗಾಗಿ ತಮ್ಮ ಸರ್ವಸುಖ ಬಿಟ್ಟು ಬಿಡುತ್ತಾರೆ.

ಮಗಳೇ! ನಿರಂತರ ನಿಜಸ್ವರೂಪಸ್ಥಿಯಲ್ಲಿ ಇರುವದೊಂದೇ ಗುರುಸಾನಿಧ್ಯ. ನಿಜಸ್ವರೂಪಸ್ಥಿತಿಯಿಂದ ಚ್ಯುತರಾಗುವದೇ ದುಃಖ-ಶೋಕ, ಜನ್ಮ-ಮರಣಾದಿಗಳಿಗೆ ಕಾರಣ. ಯಾವನಿಗೆ ಸ್ವರೂಪಸ್ಥಿತಿಯ ನಿಶ್ಚಲತೆ ಪ್ರಾಪ್ತವಾಗಿದೆಯೋ ಅವನಿಗೆ ವ್ಯವಹಾರದಲ್ಲಿ ಅಡಚಣಿ ಉತ್ಪನ್ನವಾಗುವದಿಲ್ಲ ಅಥವಾ ವಿರೋಧಿ ಶಕ್ತಿಯ ಬಾಧೆಯೂ ಆಗುವದಿಲ್ಲ. ಜಗತ್ತಿನಲ್ಲಿಯ ಸಣ್ಣ-ಸಣ್ಣ ವ್ಯಾವಹಾರಿಕ ವಿಷಯಗಳ ವಿಚಾರ ಮಾಡುವದರಿಂದ ಮನಸ್ಸಿನಲ್ಲಿ ವಿರೋಧಿವೃತ್ತಿಯ ಹೆಚ್ಚಳವಾಗಿ ಸಮಾಜದ ಕಾರ್ಯ ಶಕ್ಯವಾಗುವದಿಲ್ಲ. ಹೃದಯದಿಂದ ಗಂಭೀರ, ವ್ಯವಹಾರದಲ್ಲಿ ದಕ್ಷ, ಗುಣವಂತ ಮತ್ತು ಸಾಧನಸಂಪನ್ನ ಉಚ್ಚ ಆದರ್ಶ ಜೀವನದ ದಿಗ್ದರ್ಶನಗಳು ಸಮಾಜದಲ್ಲಿ ಎದ್ದು ಕಂಡುಬಂದರೇನೇ ಸಮಾಜದ ಉನ್ನತಿಯಾಗಲು ಶಕ್ಯವಿದೆ.

ನಿರಂತರ ನಮ್ಮ ಮನಸ್ಸು ಸ್ವರೂಪದಿಂದ ವಿಚಲಿತವಾಗದಂತಿರುವದೇ ಆತ್ಮ ಅಭ್ಯಾಸವಾಗಿದೆ ಮತ್ತು ಆತ್ಮವು ನಿತ್ಯ – ನಿರ್ವಿಕಾರಿಯಾಗಿದೆ.

ಇತಿ,

                                         ನಿನ್ನದೇ ಪ್ರಿಯ ಆತ್ಮ

                                              ಶ್ರೀಧರ