Home Local ಮಳೆ ಕಡಿಮೆಯಾದರೂ ಮುಂದುವರಿದ ಅನಾಹುತ: ಮರ ಬಿದ್ದು ಅಪಾರ ಹಾನಿ

ಮಳೆ ಕಡಿಮೆಯಾದರೂ ಮುಂದುವರಿದ ಅನಾಹುತ: ಮರ ಬಿದ್ದು ಅಪಾರ ಹಾನಿ

SHARE

ಸಿದ್ದಾಪುರ :ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರಕ್ಕೆ ಅಪಾರ ಹಾನಿ ಉಂಟಾಗಿದ್ದು, ಮಳೆ ಕಡಿಮೆಯಾದರೂ ಮಳೆ,ಗಾಳಿಯ ಪರಿಣಾಮ ಈಗ ಗೋಚಿರಸಲು ಪ್ರಾರಂಭಿಸಿದೆ. ಕಳೆದೆರಡು ದಿನಗಳಿಂದ ಬೀಸುತ್ತಿರುವ ಅಬ್ಬರದ ಗಾಳಿಯ ವೇಗಕ್ಕೆ ಬ್ರಹತ್ ಗಾತ್ರದ ಮಾವಿನ ಮರವೊಂದು ಅಡಿಕೆ ತೋಟದಲ್ಲಿ ಬಿದ್ದ ಪರಿಣಾಮ ಫಲಕ್ಕೆ ಬಂದಿದ್ದ 50ಕ್ಕೂ ಹೆಚ್ಚು ಅಡಿಕೆ ಮರಗಳು ಮುರಿದು ಬಿದ್ದು ಅಪಾರ ಹಾನಿ ಸಂಭವಿಸಿದ ಘಟನೆ ಸಿದ್ಧಾಪುರದಿಂದ ವರದಿಯಾಗಿದೆ.

ತಾಲೂಕಿನ ಹೆಗ್ಗರಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಲಗಾರ ಗ್ರಾಮದ ಡಿ.ಆರ್ ಹೆಗಡೆ ಎಂಬುವವರಿಗೆ ಸಂಬಂಧಿಸಿದ ಅಡಿಕೆ ತೋಟದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ತೊಟದಂಚಿನಲ್ಲಿಯೇ ಇದ್ದ ಮಾವಿನಮರ ಅಡಿಕೆ ತೋಟಕ್ಕೆ ಬಿದ್ದ ಪರಿಣಾಮ ಹತ್ತಾರು ವರ್ಷಗಳಿಂದ ಫಲ ನೀಡುತ್ತಿದ್ದ ಅಡಿಕೆ ಮರಗಳು ಮುರಿದು ಬಿದ್ದು ತುಂಬಲಾರದ ನಷ್ಟ ಸಂಭವಿಸಿದೆ.

ಹೆಗ್ಗರಣೆ ಗ್ರಾಮ ಲೆಕ್ಕಾಧಿಕಾರಿ ಆರ್.ಎಮ್ ನಾಯ್ಕ್ ಸ್ಥಳ ಭೇಟಿ ನೀಡಿ ಹಾನಿ ಫರಿಶೀಲನೆ ನಡೆಸಿ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಮಳೆಯ ಅವಾಂತರಕ್ಕೆ ಅನ್ನದಾತ ಕಂಗಾಲಾಗಿದ್ದು ತುಂಬಲಾರದ ನಷ್ಟದ ನೋವಿನಲ್ಲಿ ದಿನ ನೋಡುವಂತಾಗಿದೆ.