Home Important ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ಪ್ರಾರಂಭ

ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ಪ್ರಾರಂಭ

SHARE

ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಅಭಯ ಚಾತುರ್ಮಾಸ್ಯದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಆಶೀರ್ವಚನ ನೀಡಿ ಭಕ್ತರನ್ನು ಹರಸಿದರು.

ಇದು ಗೋವಿನ ಬದುಕು ಉಳಿಸುವ ಅಭಯ ಚಾತುರ್ಮಾಸ್ಯ. ಕಾರ್ಯಕರ್ತರು ಗೋವಿನ ಉಳಿವಿನ ಮಹಾನ್ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.

 

ಎಲ್ಲ ಚಾತುರ್ಮಾಸ್ಯಗಳಂತೆ ಇದು ಅಲ್ಲ. ಗುರು ಪೂರ್ಣಮಿಯಿಂದ ಗೋ ಪೂರ್ಣಮಿಯೆಡೆಗೆ ಸಾಗುವ ಚಾತುರ್ಮಾಸ್ಯ ಇದಾಗಿದೆ ಎಂದರು.

 

ಶ್ರೀಕರಾರ್ಚಿತ ಪೂಜೆ ಹಾಗೂ ವ್ಯಾಸ ಪೂಜೆಗಳು ಧಾರ್ಮಿಕ ವಿಧಿ ವಿಧಾನದಂತೆ ನೆರವೇರಿತು.6000ಕ್ಕೂ ಹೆಚ್ಚಿನ ಭಕ್ತರು ಹಾಜರಿದ್ದು ಮಂತ್ರಾಕ್ಷತೆ ಪಡೆದರು.