Home Local ಆತ್ಮಲಿಂಗ ಪೂಜಿಸಿದ ಶ್ರೀ ಮ ನಿ ಪ್ರ ವಿ। ಸಿದ್ಧವೀರ ಮಹಾಸ್ವಾಮಿಗಳು

ಆತ್ಮಲಿಂಗ ಪೂಜಿಸಿದ ಶ್ರೀ ಮ ನಿ ಪ್ರ ವಿ। ಸಿದ್ಧವೀರ ಮಹಾಸ್ವಾಮಿಗಳು

SHARE

ಗೋಕರ್ಣ: ಪ ಪೂ ಶ್ರೀ ಮ ನಿ ಪ್ರ ವಿ। ಸಿದ್ಧವೀರ ಮಹಾಸ್ವಾಮಿಗಳು , ಶ್ರೀ ಕೂಡ್ಲಿ ಮಹಾಸಂಸ್ಥಾನ ಮಠ , ತಾಳಗುಪ್ಪ , ಶಿವಮೊಗ್ಗ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 560ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ , ಸುವರ್ಣ ನಾಗಾಭರಣ ವಿಶೇಷ ಪೂಜೆ ನೆರವೇರಿಸಿದರು .

ಶ್ರೀ ದೇವಾಲಯದ ಪರವಾಗಿ ಹವ್ಯಕ ಮಹಾಮಂಡಲದ ಸಂಘಟನಾ ಕಾರ್ಯದರ್ಶಿ ಶ್ರೀ ಮುರಳಿ ಗೀಜಗಾರು ದಂಪತಿಗಳು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು .ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಭಟ್ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .