Home Local ರೈಲಿನಲ್ಲಿ ತೆರಳುತ್ತಿರುವಾಗ ಬ್ಯಾಗ್ ಹಾಗೂ ಚಿನ್ನಾಬರಣ ಎಗರಿಸಿದ ಕಳ್ಳರು: ಮುರ್ಡೇಶ್ವರದಲ್ಲಿ ಘಟನೆ.

ರೈಲಿನಲ್ಲಿ ತೆರಳುತ್ತಿರುವಾಗ ಬ್ಯಾಗ್ ಹಾಗೂ ಚಿನ್ನಾಬರಣ ಎಗರಿಸಿದ ಕಳ್ಳರು: ಮುರ್ಡೇಶ್ವರದಲ್ಲಿ ಘಟನೆ.

SHARE

ಸಾಂದರ್ಭಿಕ‌ ಚಿತ್ರ

ಭಟ್ಕಳ: ಕಾರವಾರದ ನಂದನಗದ್ದಾದ ನಿವಾಸಿ ರಾಮದಾಸ ನಾರಾಯಣ ಕಾಣಕೋಣಕರ್ ಎಂಬುವವರು ಕುಟುಂಬದೊಂದಿಗೆ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ನೇತ್ರಾವತಿ ಎಕ್ಸಪ್ರೆಸ್ ನಲ್ಲಿ‌ ತೆರಳುತ್ತಿವ ಸಂದರ್ಭದಲ್ಲಿ ಚಿನ್ನಾಭರಣ, ನಗದು ಬ್ಯಾಗ್ ಅನ್ನು ಕಳವು ಮಾಡಿರುವ ಘಟನೆ ನಿನ್ನೆ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ನಡೆದಿದೆ.

ರೈಲು ಮುರ್ಡೇಶ್ವರ ನಿಲ್ದಾಣದ ಸಮೀಪ ನಿಧಾನವಾಗಿ ಚಲಿಸುತ್ತಿರುವಾಗ ರಾಮದಾಸ ನಾರಾಯಣ ಕಾಣಕೋಣಕರ್ ಅವರ ಪತ್ನಿ ರೇಷ್ಮಾರ ವ್ಯಾನಿಟಿ ಬ್ಯಾಗ್ ಅನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಬ್ಯಾಗಿನಲ್ಲಿ 8 ಲಕ್ಷ ರೂ. ಮೌಲ್ಯದ 400 ಗ್ರಾಂ ಬಂಗಾರದ ಆಭರಣ ಹಾಗೂ 35 ಸಾವಿರ ನಗದು ಇತ್ತು ಎಂದು ಕಳ್ಳತನವಾದ ಕುಟುಂಬದವರು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.