Home Local ಹೊನ್ನಾವರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಣಗಳ ಲಾರಿ ಪೋಲೀಸ್ ಬಲೆಗೆ

ಹೊನ್ನಾವರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಣಗಳ ಲಾರಿ ಪೋಲೀಸ್ ಬಲೆಗೆ

SHARE

ಸಾಂದರ್ಭಿಕ ಚಿತ್ರ

ಹೊನ್ನಾವರ: ಅಕ್ರಮ ಗೋ ಸಾಗಾಟ ಜಾಲ ಪೋಲೀಸರ ಬಲೆಗೆ ಬಿದ್ದ ನಂತರದಲ್ಲಿ ಇಂದು ಅಕ್ರಮವಾಗಿ ಕೋಣಗಳನ್ನು ಲಾರಿಯಲ್ಲಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಹೊನ್ನಾವರದ ಅನಂತವಾಡಿ ಚೆಕ್‌ ಪೋಸ್ಟ್‌ನಲ್ಲಿ ನಡೆದಿದೆ.

ಲಾರಿಯಲ್ಲಿ ಕೋಣಗಳನ್ನು ತುಂಬಿ ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು ಲಾರಿಯ ಚಾಲಕ ಭಲೇರಾಮ ಸಿಂಗ್, ಕ್ಲೀನರ್ ಕಪೂರ್ ಅಮಿಲಾಲ್ ಹಾಗೂ ರಾಮೇಶ್ವರ ಜಾಧವ ಅವರನ್ನು ಬಂಧಿಸಲಾಗಿದೆ.

ಲಾರಿಯಲ್ಲಿ 25 ಕೋಣ ಹಾಗೂ 5 ಎಮ್ಮೆಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಒಂದು ಕೋಣ ಸಾವನ್ನಪ್ಪಿದೆ ಎಂದು ವರದಿ ತಿಳಿಸಿದೆ.