Home Local ಕಾರವಾರದಲ್ಲಿ ಆತ್ಮಹತ್ಯೆಗೆ ಶರಣಾದ ಮಹಿಳೆ! ಛಿದ್ರವಾಗಿ ಬಿದ್ದ ಶವ.

ಕಾರವಾರದಲ್ಲಿ ಆತ್ಮಹತ್ಯೆಗೆ ಶರಣಾದ ಮಹಿಳೆ! ಛಿದ್ರವಾಗಿ ಬಿದ್ದ ಶವ.

SHARE

ಕಾರವಾರ:ತಾಲೂಕಿನ ಹಾರವಾಡ ರೈಲು ನಿಲ್ದಾಣದ ಸಮೀಪದ ಹಳಿಯ ಮೇಲೆ ವಿವಾಹಿತೆಯೊಬ್ಬರ ಮೃತ ದೇಹ ಪತ್ತೆಯಾಗಿದ್ದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಆ ಕುರಿತಾದ ವಿಷಯ ಮಾಹಿತಿ ಲಭ್ಯವಾಗಿದ್ದು ಮಹಿಳೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

ಅಂಕೋಲಾ ತಾಲ್ಲೂಕಿನ ಹಾರವಾಡದ ಪ್ರಿಯಾ ಮಂಜುನಾಥ ನಾಯ್ಕ (೨೬) ಮೃತ ಮಹಿಳೆ ಎಂದು ತಿಳಿದುಬಂದಿದೆ.ಐದು ವರ್ಷದ ಹಿಂದೆ ವಿವಾಹವಾಗಿದ್ದ ಅವರಿಗೆ, ನಾಲ್ಕು ವರ್ಷದ ಪುತ್ರ ಇದ್ದಾನೆ ಎಂದು ತಿಳಿದುಬಂದಿದೆ.ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರ್ಣದ ಕುರಿತಾಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುಂದಿನ ತನಿಖೆಯ ನಂತರ ವಿವರಗಳು ಹೊರ ಬರಲಿದೆ.