Home Local ಈಜಲು ಹೋಗಿ ನೀರುಪಾಲಾದ ಯುವಕ: ಮುರ್ಡೇಶ್ವರದಲ್ಲಿ ಘಟನೆ.

ಈಜಲು ಹೋಗಿ ನೀರುಪಾಲಾದ ಯುವಕ: ಮುರ್ಡೇಶ್ವರದಲ್ಲಿ ಘಟನೆ.

SHARE

ಭಟ್ಕಳ: ಸಮುದ್ರದಲ್ಲಿ ಈಜಲು ಹೋದ ಯುವಕ ನಾಪತ್ತೆಯಾಗಿರುವ ಘಟನೆ ಮುರುಡೇಶ್ವರ ಸಮುದ್ರ ತೀರದಲ್ಲಿ ನಡೆದಿದೆ.

ಸಮುದ್ರದಲ್ಲಿ ನಾಪತ್ತೆಯಾದ ಯುವಕನನ್ನು ಕಿರಣಕುಮಾರ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಒಂಬತ್ತು ಜನರಿದ್ದ ಕುಟುಂಬ ಮುರುಡೇಶ್ವರಕ್ಕೆ ಪ್ರವಾಸ ಬಂದಿತ್ತು. ಇವರಲ್ಲಿ ನಾಲ್ವರು ಯುವಕರು ಈಜಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ. ಯುವಕನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.