Home Local ಪಿ.ಎಮ್ ಕಾಲೇಜಿನ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ

ಪಿ.ಎಮ್ ಕಾಲೇಜಿನ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ

SHARE

ಅಂಕೋಲಾ : ಸ್ಥಳೀಯ ಪಿ.ಎಮ್ ಪ.ಪೂ ಕಾಲೇಜಿನಲ್ಲಿ 2018-19ನೇ ಸಾಲಿನ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಯ ಉದ್ಘಾಟನಾ ಕಾರ್ಯಕ್ರಮವು ಗಂಗಾದೇವಿ ತೊರ್ಕೆ ಸಭಾಭವನದಲ್ಲಿ ನೆರವೇರಿತು.

ಉದ್ಘಾಟಕರಾಗಿ ಬೇಲೇಕೇರಿಯ ವಿವೇಕ ಸೌಹಾರ್ದ ಸೊಸೈಟಿ ಅಧ್ಯಕ್ಷರಾದ ಕೇಶವಾನಂದ ನಾಯಕ ಆಗಮಿಸಿ ‘ಆರೋಗ್ಯವಂತ ಸಮಾಜಕ್ಕೆ ಕ್ರೀಡಾ ಸಾಂಸ್ಕøತಿಕ ಚಟುವಟಿಕೆಗಳ ಅಗತ್ಯವಿದ್ದು ವಿದ್ಯಾರ್ಥಿಗಳ ತಮ್ಮ ಆರೋಗ್ಯ ಹಾಗೂ ಈ ರೀತಿ ಚಟುವಟಿಕೆಯತ್ತ ಗಮನ ಹರಿಸಬೇಕು’ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಪ್ರಭಾತ ಕ್ರೇಡಿಟ್ ಸೌಹಾರ್ದ ಸಹಕಾರಿ ನಿಯಮಿತ ವಾಯ್ಸ ಚೇರಮನ ಎಸ್.ಬಿ.ಪ್ರತಾಪ ಕುಮಾರ ಮಾತನಾಡುತ್ತ ‘ಯುವಕರು ಹಲವು ಆಕರ್ಷಣೆಗಳು ಇದ್ದು, ಅಂತಹ ಆಕರ್ಷಣೆಗೆ ಬಲಿಯಾಗದೇ ಭವಿಷ್ಯವನ್ನು ರೂಪಿಸಿಕೊಳ್ಳಿ ಹಾಗೂ ದಿನಕರ ದೇಸಾಯಿಯವರ ಸಂಸ್ಥೆಯ ವಿದ್ಯಾರ್ಥಿಗಳಾದ ನೀವು ಅವರ ಪರಂಪರೆ ಮುಂದುವರೆಸಿ’ ಎಂದರು.

ಪ್ರಭಾರಿ ಪ್ರಾಚಾರ್ಯ ಪಾಲ್ಗುಣ ಗೌಡ ಅಧ್ಯಕ್ಷತೆ ವಹಿಸಿದರು. ಹಿರಿಯ ಉಪನ್ಯಾಸಕರಾದ ಉಲ್ಲಾಸ ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿಸಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕರಾದ ರಮಾನಂದ ನಾಯಕ ಸ್ವಾಗತಿಸಿದರು.ಜಿಮಖಾಖಾ ವಿಭಾಗದ ಉಪಾಧ್ಯಕ್ಷ ಶ್ರೀ ಶ್ರೀನಿವಾಸ ಕೆ ಜಿಮಖಾನಾ ಚಟುವಟಿಕೆಗಳ ವಾರ್ಷಿಕ ವಿವರ ಓದಿದರು. ಕುಮಾರಿ ಲಕ್ಷ್ಮಿ ಸಂಗಡಿಗರು ಸ್ವಾಗತಗೀತೆ ಹಾಡಿದರು. ಉಪನ್ಯಾಸಕರಾದ ಅರವಿಂದ ಆಗೇರ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿ ಸಂಜಯ ಮಾರುತಿ ನಾಯ್ಕ ಲಕ್ಷ್ಮೀ ನಾಯಕ ವೇದಿಕೆಯಲ್ಲಿದ್ದರು. ಉಪನ್ಯಾಸಕರಾದ ರಮೇಶ ಗೌಡ ಸರ್ವರನ್ನೂ ವಂದಿಸಿದರು.