Home Local ಶ್ರೀ ಸಂಸ್ಥಾನದವರ ವರ್ಧಂತಿ ನಿಮಿತ್ತ ಪ್ರಗತಿ ವಿದ್ಯಾಲಯ ಮೂರೂರಿನಲ್ಲಿ ನಡೆಯಿತು ಕಾರ್ಯಕ್ರಮ.

ಶ್ರೀ ಸಂಸ್ಥಾನದವರ ವರ್ಧಂತಿ ನಿಮಿತ್ತ ಪ್ರಗತಿ ವಿದ್ಯಾಲಯ ಮೂರೂರಿನಲ್ಲಿ ನಡೆಯಿತು ಕಾರ್ಯಕ್ರಮ.

SHARE

ಕುಮಟಾ: ತಾಲೂಕಿನ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಪರಮಪೂಜ್ಯ ರಾಘವೇಶ್ವರ ಭಾರತೀ ಸ್ವಾಮಿಗಳವರ ವರ್ಧಂತಿ ನಿಮಿತ್ತ ಕಾರ್ಯಕ್ರಮ ನಡೆಯಿತು.

ಶ್ರೀ ಸಂಸ್ಥಾನದ ವರ್ಧಂತಿ ಉತ್ಸವದಲ್ಲಿ ಪಾಲ್ಗೊಂಡು ಗೋವಿನ ತಳಿಗಳ ರಕ್ಷಣೆಯಲ್ಲಿ ಶ್ರೀಗಳ ಪಾತ್ರದ ಬಗ್ಗೆ ಅತ್ಯಂತ ಮಾರ್ಮಿಕವಾಗಿ ಪ್ರಾಂಶುಪಾಲರಾದ ಎಂ.ಜಿ ಭಟ್ಟ ಮಾತನಾಡಿದರು. ಅವರು ಗೋವಿನ ರಕ್ಷಣೆಯಲ್ಲಿ ಶ್ರೀಸಂಸ್ಥಾನದವರ ಪಾತ್ರವನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸಿದರು. ಹಾಗೆಯೇ ಭಾನ್ಕುಳಿ ಯಲ್ಲಿ ಶ್ರೀ ಸಂಸ್ಥಾನದ ಕಲ್ಪನೆ ಯಾದ ಗೋ ಸ್ವರ್ಗದ ಬಗ್ಗೆಯೂ ಕೂಡ ತಿಳಿಸಿ ಪ್ರತಿಯೊಬ್ಬರೂ ಕೂಡ ಗೋವಿನ ರಕ್ಷಣೆಯಲ್ಲಿ ಶ್ರೀಗಳ ಮಾರ್ಗದರ್ಶನದಂತೆ ನಡೆಯಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಆಡಳಿತ ಕಮಿಟಿಯ ಕಾರ್ಯದರ್ಶಿಯವರು ಹಾಗೂ ಶಿಕ್ಷಣ ಸಮಿತಿಯ ಶ್ರೀ ಜೀ.ವಿ ಹೆಗಡೆ ಅವರು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಶ್ರೀಧರ ಸಂಸ್ಕೃತ ಪಾಠಶಾಲೆಯ ಮುಖ್ಯಧ್ಯಾಪಕರಾದ ಶ್ರೀಪಾದ ಭಟ್ಟ ,ಲೋಕೇಶ ಹೆಗಡೆ ಅರುಣ್ ನಾಯಕ, ಶ್ರೀರಾಮ್ ಶಾಸ್ತ್ರಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ಜಿ ಆರ್ ನಾಯಕ್ ಕಾರ್ಯಕ್ರಮ ನಿರೂಪಣೆ ಮಾಡಿದರು.ಮನೋಹರ ಹರಿಕಾಂತ ಕೂಡ ಇದ್ದರು.