Home Important ಅತೀ ಹೆಚ್ಚು ನೀರು ಸಂಗ್ರಹ ಸಾಮರ್ಥ್ಯದ ಇಡುಕ್ಕಿ ಡ್ಯಾಮ್ ಗೇಟ್ ತೆರೆಯಲು ಕೇರಳ ಸರ್ಕಾರ ನಿರ್ಧಾರ.

ಅತೀ ಹೆಚ್ಚು ನೀರು ಸಂಗ್ರಹ ಸಾಮರ್ಥ್ಯದ ಇಡುಕ್ಕಿ ಡ್ಯಾಮ್ ಗೇಟ್ ತೆರೆಯಲು ಕೇರಳ ಸರ್ಕಾರ ನಿರ್ಧಾರ.

SHARE

ತಿರುವನಂತಪುರ: 26 ವರ್ಷಗಳ ಬಳಿಕ ಇಡುಕ್ಕಿ ಡ್ಯಾಮ್ ಗೇಟ್ ಓಪನ್, ಕಾರಣ ಏನು ಗೊತ್ತಾ?
ಕೇರಳದ ಇಡುಕ್ಕಿ ಡ್ಯಾಮ್ನಲ್ಲಿ ದೇಶದಲ್ಲೇ ಅತೀ ಹೆಚ್ಚು ನೀರು ಸಂಗ್ರಹವಾಗುತ್ತೆ.
ಈ ಡ್ಯಾಮ್ ಕೇರಳದ ಕುರತ್ತಿ ಗುಡ್ಡಗಾಡು ಪ್ರದೇಶದಲ್ಲಿರುವ ಪೆರಿಯಾರ್ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಈ ಡ್ಯಾಂ ನ ಗೇಟ್ ನ್ನು 26 ವರ್ಷಗಳ ಬಳಿಕ ತೆರೆಯಲಾಗುತ್ತಿದೆ. ದಕ್ಷಿಣ ಏಷ್ಯಾದಲ್ಲೇ ಅತೀ ದೊಡ್ಡ ಮತ್ತು ಅತೀ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಡ್ಯಾಮ್ ನ ಗೇಟ್ ಗಳನ್ನು ತೆರೆದು ನೀರು ಬಿಡುವಂತೆ ಕೇರಳ ಸರ್ಕಾರ ಸೂಚನೆ ನೀಡಿದೆ.
ಕೇರಳದಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಇಡುಕ್ಕಿ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಈಗಾಗಲೇ ಡ್ಯಾಂ ತುಂಬಿದ್ದು, ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇಡುಕ್ಕಿ ಡ್ಯಾಂ ಒಟ್ಟು 2, 400 ಅಡಿಗಳ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಈಗಾಗಲೇ ಡ್ಯಾಂಗೆ ಅಂದಾಜು 2,392 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಡ್ಯಾಮ್ ಗೇಟ್ ಗಳನ್ನು ತೆರೆದು ನೀರು ಹೊರ ಬಿಡುವಂತೆ ಕೇರಳ ಸರ್ಕಾರ ಆದೇಶಿಸಿದೆ.

26 ವರ್ಷಗಳ ಬಳಿಕ ಡ್ಯಾಂ ತುಂಬಿದ್ದು, ಹೆಚ್ಚುವರಿ ನೀರನ್ನು ಹೊರಗೆ ಬಿಡಲು ಆದೇಶಿಸಲಾಗಿದೆ. ಇನ್ನು ನೀರು ಬಿಡುತ್ತಿರುವ ಹಿನ್ನಲೆಯಲ್ಲಿ ಪೆರಿಯಾರ್ ನದಿಯ ಸುತ್ತಮತ್ತಲಿನ ಗ್ರಾಮಗಳ ಜನರಿಗೆ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.