Home Local ಕುಮಟಾಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಈಗ ಪೋಲೀಸರ ಅತಿಥಿ!

ಕುಮಟಾಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಈಗ ಪೋಲೀಸರ ಅತಿಥಿ!

SHARE

ಕುಮಟಾ: ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರ ಬೆಳಿಗ್ಗೆ ಖಚಿತ ಮಾಹಿತಿಯನ್ನು ಪಡೆದ ಕುಮಟಾ ಸಿ.ಪಿ.ಐ.ಸಂತೊಷ ಶೆಟ್ಟಿ, ಹಾಗೂ ಪಿ.ಎಸ್.ಐ.ಸಂಪತ್ ಕುಮಾರ ಅವರು ಕಾರ್ಯಪ್ರವರ್ತರಾಗಿ ವಿಶೇಷ ತಂಡ ರಚಿಸಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕುಮಟಾದ ಹೆಗಡೆ ಕ್ರಾಸ್ ನ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ನ ಬಳಿ ಓರಿಸ್ಸಾ ಮೂಲದ ಮಹೇಂದ್ರ ಕುಮಾರ್ ಎಂಬಾತ ಕೈಚೀಲದಲ್ಲಿ ಸುಮಾರು ಒಂದು ಕೆ.ಜಿ.ಯಷ್ಟು ಗಾಂಜಾ ವನ್ನ ಇಟ್ಟುಕೊಂಡು ಮಾರುತ್ತಿದ್ದ.ವಿಶೇಷ ತಂಡದೊಂದಿಗೆ ಬಂದ ಕುಮಟಾ ಪೋಲಿಸ್ ಪಡೆ ಗಾಂಜಾ ಸಹಿತವಾಗಿ ಅರೋಪಿಯನ್ನ ಸೆರೆ ಹಿಡಿದಿದ್ದಾರೆ.

ಈ ಕುರಿತು ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆ ಮುಂದುವರಿದಿದೆ.

ಈ ಪ್ರಕರಣ ಕುಮಟಾದಲ್ಲಿ ಜನತೆಗೆ ಆತಂಕ ಉಂಟುಮಾಡಿದೆ ಎಂದೇ ಬಣ್ಣಿಸಲಾಗುತ್ತಿದೆ. ಗಾಂಜಾ ಮಾರಾಟ ಜಾಲ ಪತ್ತೆಗೆ ಆರಕ್ಷಕರು ನಡೆಸಿದ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.