Home Local ಶಿರಸಿಯಲ್ಲಿ ಲಾಡ್ಜನಲ್ಲಿ ಆತ್ಮ ಹತ್ಯೆಗೆ ಶರಣಾದ ಯುವಕ: ದಾಖಲಾಯ್ತು ಪ್ರಕರಣ

ಶಿರಸಿಯಲ್ಲಿ ಲಾಡ್ಜನಲ್ಲಿ ಆತ್ಮ ಹತ್ಯೆಗೆ ಶರಣಾದ ಯುವಕ: ದಾಖಲಾಯ್ತು ಪ್ರಕರಣ

SHARE

ಶಿರಸಿ:ತಾಲೂಕಿನ ಪ್ರಮುಖ ಲಾಡ್ಜ ಒಂದರಲ್ಲಿ ಉಳಿಯಲೆಂದು ರೂಂ ಪಡೆದಾತ ಯಾವುದೋ ಕಾರಣಕ್ಕೆ ಮನನೊಂದು ನಿನ್ನೆ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಶಿರಸಿಯ ಸೀಮಾ ಲಾಡ್ಜ್ ನಲ್ಲಿ ಹುಬ್ಬಳ್ಳಿ ಮೂಲದ ನಾಮದೇವ ಗಣಾಚಾರ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

ವ್ಯಕ್ತಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ಬಗ್ಗೆ ತನಿಖೆ‌ ನಡೆದಿದೆ.ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ತನಿಖೆಯ ನಂತರದಲ್ಲಿ ಪೂರ್ಣ ಮಾಹಿತಿ ಹೊರ ಬರುವ ನಿರೀಕ್ಷೆ ಇದೆ.