Home Important ಓರ್ವ ಭಾರತೀಯ ಸೇರಿ ಮೂವರನ್ನು ಹತ್ಯೆ ಮಾಡಿದ ಪ್ರತ್ಯೇಕತಾವಾದಿಗಳು!

ಓರ್ವ ಭಾರತೀಯ ಸೇರಿ ಮೂವರನ್ನು ಹತ್ಯೆ ಮಾಡಿದ ಪ್ರತ್ಯೇಕತಾವಾದಿಗಳು!

SHARE

ಕಾಬೂಲ್​ : ಅಫ್ಘಾನಿಸ್ತಾನದ ಕಾಬೂಲ್​ನ ಪ್ರತ್ಯೇಕತಾವಾದಿಗಳು ಓರ್ವ ಭಾರತೀಯನನ್ನೊಳಗೊಂಡು ಮೂವರು ವಿದೇಶಿಗರನ್ನು ಅಪಹರಣ ಮಾಡಿ ಇಂದು ಹತ್ಯೆಗೈದಿದ್ದಾರೆ.

ಕಾಬೂಲ್​ನಲ್ಲಿರುವ ಸಾಡೆಕ್ಸೋ ಎಂಬ ವಿಶ್ವದ 2ನೇ ಅತಿದೊಡ್ಡ ಅಂತಾರಾಷ್ಟ್ರೀಯ ಫುಡ್​ ಮತ್ತು ಕ್ಯಾಟರಿಂಗ್​ ಸರ್ವಿಸ್​ ಕಂಪನಿಯಲ್ಲಿ ಬಾಣಸಿಗರಾಗಿ ಕೆಲಸ ನಿರ್ವಹಿಸುತ್ತಿದ್ದ ಈ ಮೂವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಭಾರತ ಮೂಲದ 39 ವರ್ಷದ ಪುರುಷ, ಮಲೇಷ್ಯಾದ 64 ವರ್ಷದವ ಮತ್ತು ಮ್ಯಾಸಿಡೋನಿಯಾದ 37 ವರ್ಷದ ವ್ಯಕ್ತಿಗಳು ಈ ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ತಮ್ಮ ಕೆಲಸದ ನಿಮಿತ್ತ ವಾಹನದಲ್ಲಿ ಹೋಗುತ್ತಿದ್ದಾಗ ಉಗ್ರರು ಅವರನ್ನು ಅಪಹರಿಸಿದ್ದರು.

ಕಾರಿನಲ್ಲಿ ಹೋಗುತ್ತಿದ್ದಾಗ ಅಪಹರಣಕ್ಕೊಳಗಾದ ಈ ಮೂವರನ್ನು ಗುಂಡಿಕ್ಕಿ ಕೊಲ್ಲಲಾಗಿದ್ದು, ಅವರ ದೇಹಗಳು ಕಾರಿನೊಳಗೆ ಪತ್ತೆಯಾಗಿವೆ. . ಘಟನೆ ನಡೆದ ಸ್ಥಳದಲ್ಲಿ ಸಿಕ್ಕಿರುವ ಗುರುತಿನ ಚೀಟಿಯಿಂದಾಗಿ ಈ ಮೂವರನ್ನು ಗುರುತಿಸಲಾಗಿದೆ ಎಂದು ಅಫ್ಘಾನ್​ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.