Home Local ಸಾತೊಡ್ಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಹುಡುಗನ ಶವ ಪತ್ತೆ!

ಸಾತೊಡ್ಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಹುಡುಗನ ಶವ ಪತ್ತೆ!

SHARE

ಯಲ್ಲಾಪುರ: ಸಾತೊಡ್ಡಿ ಜಲಪಾತ ವೀಕ್ಷಣೆಗೆಂದು ತೆರಳಿ ಬುಧವಾರ ನಾಪತ್ತೆಯಾಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದೆ.

ಮುಂಡಗೋಡಿನ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಯುಸೂಫ್ ಅಲ್ಲಾವುದ್ದೀನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಮೃತ ವಿದ್ಯಾರ್ಥಿ.

ಮುಂಡಗೋಡ ತಾಲೂಕಿನಿಂದ 14 ಜನ ಸ್ನೇಹಿತರು ಸಾತೊಡ್ಡಿ ಪ್ರವಾಸಕ್ಕೆ ಬಂದಿದ್ದರು. ಫಾಲ್ಸ್ ವೀಕ್ಷಣೆ ಸಂದರ್ಭದಲ್ಲಿ ಅಕಸ್ಮಾತ್ತಾಗಿ ಯೂಸುಫ್ ಕಾಲು ಜಾರಿ ನೀರಿನಲ್ಲಿ ಬಿದ್ದು ಕಾಣೆಯಾಗಿದ್ದ. ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆದಿತ್ತಾದರೂ ಶವ ದೊರೆತಿರಲಿಲ್ಲ.

ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು, ಮೀನುಗಾರರ ಸತತ ಹುಡುಕಾಟದ ಬಳಿಕ ಜಲಪಾತದ ಸಮೀಪದ ಕಲ್ಲು ಬಂಡೆಗಳ ನಡುವೆ ಶವ ಇಂದು ಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.