Home Local ಸಂಪ್ರಭಾ ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ : ವಿದ್ಯಾರ್ಥಿಗಳಿಗೆ ಪಟ್ಟಿ ವಿತರಣಾ ಕಾರ್ಯಕ್ರಮ |...

ಸಂಪ್ರಭಾ ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ : ವಿದ್ಯಾರ್ಥಿಗಳಿಗೆ ಪಟ್ಟಿ ವಿತರಣಾ ಕಾರ್ಯಕ್ರಮ | ಶಾಸಕ ಸುನೀಲ್ ಅಭಿಮತ 

SHARE

ಹೊನ್ನಾವರ: ಒಂದು ಶಾಲೆ ಸರ್ಕಾರದಿಂದ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅದು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಗ್ರಾಮೀಣ ಸಂಸ್ಥೆಗಳು, ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ಭಟ್ಕಳ ವಿಧಾನಸಭಾ ಶಾಸಕ ಸುನೀಲ್ ನಾಯ್ಕ ಹೇಳಿದರು.

ತಾಲೂಕಿನ ಮೂಡ್ಕಣಿ ಸಮೀಪದ ಅಡ್ಕಾರ ಶಾಲೆಯಲ್ಲಿ ಸಂಪ್ರಭಾ ಸೇವಾ ಟ್ರಸ್ಟ್ ಆಯೋಜಿಸಿದ್ದ ಪಟ್ಟಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಒಂದು ಶಾಲೆಯಲ್ಲಿ ಕಳೆದ 4 ವರ್ಷಗಳಿಂದ ಸಂಪ್ರಭಾ ಸೇವಾ ಟ್ರಸ್ಟ್ ಪಟ್ಟಿ ವಿತರಣಾ ಕಾರ್ಯವನ್ನು ನಡೆಸುತ್ತಿದೆ. ಇದರ ಅಧ್ಯಕ್ಷರಾದ ವಿನಾಯಕ ನಾಯ್ಕ ಇವರ ಕಾರ್ಯ ಶ್ಲಾಘನೀಯ ಎಂದರು.

ಶಾಲೆಯಲ್ಲಿ ಕೊಠಡಿಯ ಕೊರತೆ ಇದ್ದು ಅದನ್ನು ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದರು. ಶಾಲೆಯ ಸಣ್ಣ ಪುಟ್ಟ ರಿಪೇರಿಗಳಿಗಾಗಿ 1 ಲಕ್ಷ ರೂಪಾಯಿ ಕೊಡುವುದಾಗಿ ಘೋಷಿಸಿದರು.

ಸಂಸ್ಥೆಯ ಅಧ್ಯಕ್ಷ ವಿನಾಯಕ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಜು ನಾಯ್ಕ, ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷ ಜಯಂತ ನಾಯ್ಕ, ಗ್ರಾ.ಪಂ. ಸದಸ್ಯ ಗಜಾನನ ನಾಯ್ಕ, ಮಂಜುನಾಥ ನಾಯ್ಕ, ರಮೇಶ್ ನಾಯ್ಕ ಇದ್ದರು.

ಮುಖ್ಯಾಧ್ಯಾಪಕರಾದ ಶ್ರೀಧರ ದೀಕ್ಷಿತ್ ಸ್ವಾಗತಿಸಿದರು. ಸಹಶಿಕ್ಷಕಿ ಜಯಾ ಶ್ಯಾನಭಾಗ್ ವಂದಿಸಿದರು. ಶಿಕ್ಷಕರಾದ ಎಂ.ಎಂ.ನಾಯ್ಕ, ಎಸ್.ಎಂ.ಭಟ್, ವಿದ್ಯಾ ಹೆಗಡೆ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಎಂ.ಎಸ್.ಶೋಭಿತ್ ಮೂಡ್ಕಣಿ