Home Local ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ ಪಡೆಯಬೇಕು : ದಿನಕರ ಶೆಟ್ಟಿ

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ ಪಡೆಯಬೇಕು : ದಿನಕರ ಶೆಟ್ಟಿ

SHARE

ಕುಮಟಾ: ದಿನಾಂಕ 05/08/2018 ರಂದು ಭಾನುವಾರ10 ಘಂಟೆಗೆ ಜನತಾ ವಿದ್ಯಾಲಯ ಕತಗಾಲ ಕುಮಟಾದಲ್ಲಿ 162 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡುಗೆ ಅನಿಲ ಸಂಪರ್ಕ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.

ಈ ಸಭೆಯನ್ನು ಶ್ರೀ ದಿನಕರ ಶೆಟ್ಟಿ ಮಾನ್ಯ ಶಾಸಕರು ಕುಮಟಾ-ಹೊನ್ನಾವರ ಕ್ಷೇತ್ರ ಇವರು ಉದ್ಘಾಟಿಸಿ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಈ ಭಾಗದ 162 ಜನ ಫಲಾನುಭವಿಯಾಗಿರುವದು ಸಂತಸದ ಸಂಗತಿಯಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ಬಿಜೆಪಿ ಮುಖಂಡರಾದ ಡಾ// ಜಿ.ಜಿ ಹೆಗಡೆಯವರು ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾಯ೯ವೈಖರಿಯನ್ನು ಮತ್ತು ಅವರು ಕೈಗೊಂಡ ಜನಪರ ಯೋಜನೆಗಳನ್ನು ಶ್ಲಾಘಿಸಿದರು. ಡಾ// ಎಸ್.ಎಸ್.ಭಟ್ ನಿವೃತ್ತ ಪ್ರಾಚಾರ್ಯರು ಮಾತನಾಡಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸೂಚಿಸಿದರು. ಬಿಜೆಪಿಯ ಮುಖಂಡರಾದ ಮದನ ನಾಯಕ ಮಾತನಾಡಿ ಅಡುಗೆ ಅನಿಲದ ಉಪಯೋಗ ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮದ ಬಗ್ಗೆ ವಿವರಿಸಿದರು.

ಇದೆ ವೇಳೆಯಲ್ಲಿ ಜಿಲ್ಲಾಪಂಚಾಯತ ಸದಸ್ಯರಾದ ಶ್ರೀ ಗಜಾನನ.ಎಂ. ಪೈ ರವರು ಮಾನ್ಯ ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಶಾಸಕರ ಕಾಯ೯ವೈಖರಿಯನ್ನು ಶ್ಲಾಘಿಸಿದರು. ಈ ಸಭೆಯಲ್ಲಿ ಶ್ರೀ ವಿವೇಕ ಜಾಲಿಸತ್ಗಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು. ಶ್ರೀಮತಿ ಸುಮನಾ ಅಂಬಿಗ ತಾ.ಪಂ. ಸದಸ್ಯರು. ಶ್ರೀಮತಿ ರೇಖಾ ಭಟ್ಟ, ಶ್ರೀ ಅಶೋಕ ಪಿಕಳೆ, ಶ್ರೀ ವಿನಾಯಕ ಭಟ್ಟ, ಶ್ರೀ ಜಿ.ಆಯ್.ಹೆಗಡೆ, ಶ್ರೀ ಹೇಮಂತ್ ಕುಮಾರ್, ಶ್ರೀ ಪ್ರಶಾಂತ ನಾಯ್ಕ, ಶ್ರೀ ಅನಂತ ಶ್ಯಾನಭಾಗ, ಎಸ್.ಎಸ್.ಹೆಗಡೆ ಪ್ರಾಶುಂಪಾಲರು ಉಪಸ್ಥಿತರಿದ್ದರು. ಶ್ರೀ ಲೋಕೇಶ ಹೆಗಡೆ ಕಾಯ೯ಕ್ರಮ ನಿರೂಪಣೆ ಮಾಡಿದರು.