Home Local ಶಿರಾಲಿಯ ಶಾರದಾ ಹೊಳೆಗೆ ಉರುಳಿತು ಟ್ಯಾಂಪೋ: ಹಾರಿ ಹೋಯ್ತು ಓರ್ವನ ಪ್ರಾಣ.

ಶಿರಾಲಿಯ ಶಾರದಾ ಹೊಳೆಗೆ ಉರುಳಿತು ಟ್ಯಾಂಪೋ: ಹಾರಿ ಹೋಯ್ತು ಓರ್ವನ ಪ್ರಾಣ.

SHARE

ಭಟ್ಕಳ: ಮುರ್ಡೇಶ್ವರಕ್ಕೆ ತೆರಳುತ್ತಿದ್ದ ಟೆಂಪೋವೊಂದಕ್ಕೆ ಹಿಂದಿನಿಂದ ಬಂದ ಟ್ರಕ್‌ವೊಂದು ಗುದ್ದಿದ ಪರಿಣಾಮ ಶಿರಾಲಿಯ ಶಾರದಹೊಳೆ ಸೇತುವೆಯ ರಸ್ತೆಯ ಕೆಳಭಾಗಕ್ಕೆ ಟೆಂಪೋ ಉರುಳಿ ಬಿದ್ದು ಓರ್ವ ಮೃತಪಟ್ಟಿದ್ದಾನೆ.

ಶಾರದಹೊಳೆಯ ನಿವಾಸಿ ಭೈರಪ್ಪ ನಾಯ್ಕ ಎಂಬುವವರು ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಭಟ್ಕಳದಿಂದ ಹೊರಟ ಟೆಂಪೊ ಶಾರದಹೊಳೆ ಸಮೀಪಿಸುತ್ತಿದ್ದಂತೆ ಟೆಂಪೋದಲ್ಲಿದ್ದ ಪ್ರಯಾಣಿಕ ಭೈರಪ್ಪ ಅವರು ತಮ್ಮ ಸ್ಟಾಪ್ ಬಂದಿದೆ ಎಂದು ಟೆಂಪೊ ನಿಲ್ಲಿಸಿ ಕೆಳಕ್ಕಿಳಿದಿದ್ದಾರೆ.ಈ ವೇಳೆ ಟ್ರಕ್‌ವೊಂದು ಬಂದು ಟೆಂಪೋಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಟೆಂಪೋ ಸಮೇತ ಕೆಳಕ್ಕೆ ಇಳಿದಿದ್ದ ಭೈರಪ್ಪ ರಸ್ತೆಯ ಕೆಳಕ್ಕೆ ಬಿದ್ದಿದ್ದಾರೆ.

ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ. ಇನ್ನು ಟೆಂಪೋದಲ್ಲಿದ್ದ 15ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಲ್ಲಿ ಎಂಟು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಂಬ್ಯುಲೆನ್ಸ್ ಮೂಲಕ ಕರೆದೊಯ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.