Home Local ರಸಪ್ರಶ್ನೆಯಲ್ಲಿ ಚಿತ್ರಿಗಿ ಪ್ರೌಢಶಾಲೆಯ ಪ್ರಣೀತ್, ವಿಶ್ವಾಸ್ ಜೋಡಿ ದ್ವಿತೀಯ

ರಸಪ್ರಶ್ನೆಯಲ್ಲಿ ಚಿತ್ರಿಗಿ ಪ್ರೌಢಶಾಲೆಯ ಪ್ರಣೀತ್, ವಿಶ್ವಾಸ್ ಜೋಡಿ ದ್ವಿತೀಯ

SHARE

ಕುಮಟಾ: ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಗರಾಭಿವೃದ್ಧಿ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಕಾರವಾರದ ರಂಗಮಂದಿರದಲ್ಲಿ ಜರುಗಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಾದ ಕುಮಾರ ವಿಶ್ವಾಸ ವೆಂಕಟೇಶ ಪೈ ಮತ್ತು ಕುಮಾರ ಪ್ರಣೀತ ರವಿರಾಜ್ ಕಡ್ಲೆ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಆರೋಗ್ಯಕರ ನಗರಗಳಾಗಿ ರೂಪಾಂತರಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಸ್ವಚ್ಛ ಭಾರತ ಮಿಷನ್ ವತಿಯಿಂದ ನಗರಾಭಿವೃದ್ಧಿ ಇಲಾಖೆ ಜಿಲ್ಲಾಡಳಿತದೊಂದಿಗೆ ರಾಜ್ಯಾದ್ಯಂತ 8 ರಿಂದ 12 ನೆಯ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಉತ್ತರ ಕನ್ನಡದ 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಶಸ್ತಿ ಪತ್ರ ಆರು ಸಾವಿರ ನಗದು ಬಹುಮಾನವನ್ನು ಡಾ.ದಿಲೀಶ್ ಐಎಎಸ್ ಪ್ರೊಬೇಶನರಿ ಅವರಿಂದ ಸ್ವೀಕರಿಸಿದರು. ಇವರ ಸಾಧನೆಗೆ ಮುಖ್ಯಾಧ್ಯಾಪಕ ಎನ್.ಆರ್.ಗಜು ಮತ್ತು ಶಿಕ್ಷಕವೃಂದದವರು ಅಭಿನಂದಿಸಿದ್ದಾರೆ.