Home Local ಶ್ರೀ ಶ್ರೀ ಭಾಗ್ಯಶ್ರೀ ಮಾತಾಜಿಯವರಿಗೆ ಗೋಕರ್ಣ‌ ಗೌರವ

ಶ್ರೀ ಶ್ರೀ ಭಾಗ್ಯಶ್ರೀ ಮಾತಾಜಿಯವರಿಗೆ ಗೋಕರ್ಣ‌ ಗೌರವ

SHARE

ಪ ಪೂ ಶ್ರೀ ಶ್ರೀ ಭಾಗ್ಯಶ್ರೀ ಮಾತಾಜಿ , ಭಾಗ್ಯವಂತಿ ಆಶ್ರಮ, ಸಿಂಧಗಿ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 575ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ , ಸುವರ್ಣ ನಾಗಾಭರಣ ವಿಶೇಷ ಪೂಜೆ ನೆರವೇರಿಸಿದರು .

ಶ್ರೀ ದೇವಾಲಯದ ಪರವಾಗಿ ಶ್ರೀಮತಿ ಗೀತಾ ಮತ್ತು ಶ್ರೀ ಹರ್ಷ ಮಾಸ್ಕೇರಿ ಗೋಕರ್ಣ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಭಟ್ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .