Home Local ನಾವು ಚುನಾವಣೆ ನಂತರವೂ ಉಚಿತ ಗ್ಯಾಸ್ ಸಿಲೆಂಡರ್ ನೀಡುತ್ತಿದ್ದೇವೆ: ವಿರೋಧಿಗಳಿಗೆ ಟಾಂಗ್ ನೀಡಿದ ದಿನಕರ ಶೆಟ್ಟಿ.

ನಾವು ಚುನಾವಣೆ ನಂತರವೂ ಉಚಿತ ಗ್ಯಾಸ್ ಸಿಲೆಂಡರ್ ನೀಡುತ್ತಿದ್ದೇವೆ: ವಿರೋಧಿಗಳಿಗೆ ಟಾಂಗ್ ನೀಡಿದ ದಿನಕರ ಶೆಟ್ಟಿ.

SHARE

ಹೊನ್ನಾವರ: ತಾಲ್ಲೂಕಿನ ಸಾಲಕೋಡದಲ್ಲಿ ನಡೆದ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ವಿತರಣಾ ಸಮಾರಂಭ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಉಜ್ವಲ ಅನಿಲ ಸಲಕರಣೆ ಹಾಗೂ ಸಿಲಿಂಡರ್ ವಿತರಿಸಿ ಶಾಸಕರಾದ ದಿನಕರ ಶೆಟ್ಟಿಯವರು ಮಾತನಾಡಿದರು.ಈ ಸಂದರ್ಭದಲ್ಲಿ ಅವರು ವಿರೋಧಿಗಳಿಗೆ ಟಾಂಗ್ ನೀಡಿ ನಮ್ಮ ವಿರೋಧಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಸಿಲಿಂಡರ್ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು ಆದರೆ ನಾವು ಚುನಾವಣೆಯ ನಂತರವೂ ಕೂಡಾ ನೀಡುತ್ತಿದ್ದೆವೇ ಇದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಹಾಗಾಗಿ ಇದರ ಸದುಪಯೋಗ ಎಲ್ಲರೂ ಪಡೆಯಬೇಕು ಎಂದರು.

ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿ ಆದ ನಂತರ ಹಲವಾರು ಯೋಜನೆಯನ್ನು ತಂದಿದ್ದಾರೆ ಅದರಲ್ಲಿ ಉಜ್ವಲ ಅನಿಲ ಯೋಜನೆ ಕೂಡ ಒಂದು. ಇದರ ಉದ್ದೇಶ ಹೊಗೆ ಮುಕ್ತ ಭಾರತ, ಪರಿಸರ ಮಾಲಿನ್ಯ ನಿಯಂತ್ರಣ, ಮಹಿಳೆಯರ ಆರೋಗ್ಯ ರಕ್ಷಣೆ ಎಲ್ಲಾ ದೃಷ್ಟಿಯಿಂದ ಉತ್ತಮ ಯೋಜನೆ ಇದಾಗಿದೆ.ಪರಿಸರ ರಕ್ಷಣೆ ಇನ್ನೂ ಮುಂದಿನ ದಿನಗಳಲ್ಲಿ ಅನಿವಾರ್ಯ ಆಗಲಿದೆ. ಇಂದಿನಿಂದಲೇ ನಾವು ಪರಿಸರ ರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಆಮ್ಲಜನಕದ ಸಿಲಿಂಡರ್ ತೆಗೆದುಕೊಂಡು ಒಡಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಜಿ.ಪಂ‌ ಸದಸ್ಯೆ ಶ್ರೀಕಲಾ ಶಾಸ್ತ್ರೀ ಮಾತನಾಡಿ ಮೋದಿಯವರ ಕನಸಿನ ಯೋಜನೆಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಊರಿನ ಪ್ರಮಖರು ಹಾಗೂ ಸಾರ್ವಜನಿಕರು ಮತ್ತು ಫಲಾನುಭವಿಗಳು ಹಾಜರಿದ್ದರು.