Home Local ಕುಮಟಾ ಬೀಚ್ ನಲ್ಲಿ ಕಣ್ಮರೆಯಾದ ಆನಂದನ ಶವ ಪತ್ತೆ! ಕುಟುಂಬಕ್ಕೆ‌ಆಘಾತ

ಕುಮಟಾ ಬೀಚ್ ನಲ್ಲಿ ಕಣ್ಮರೆಯಾದ ಆನಂದನ ಶವ ಪತ್ತೆ! ಕುಟುಂಬಕ್ಕೆ‌ಆಘಾತ

SHARE

ಕುಮಟಾ :ಕಳೆದ ರವಿವಾರ ಗೆಳೆಯನ ಜೊತೆಯಲ್ಲಿ ಕುಮಟಾ ಸಮುದ್ರ ಬಂಡೆಯ ಮೇಲೆ ನಿಂತಾಗ ಕಾಲು ಜಾರಿ ಮೇಲಿಂದ ಸಮುದ್ರದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಕುಮಟಾದ ವನ್ನಳ್ಳಿ ನಿವಾಸಿ ಆನಂದ ನಾರಾಯಣ ಮೊಗೆರ ಶವದ ಹುಡುಕಾಟ ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ ಸಹಾಯದಿಂದ ನಡೆಯುತ್ತಿತು ಆದರೆ ಇಂದು ಬೆಳಿಗ್ಗಿನ ಜಾವ ಆತನ ಶವ 7.45ರ ಸುಮಾರಿಗೆ ದೊರೆತಿದೆ.

ಮುಂಜಾನೆಯ ಹೊತ್ತಿಗೆ ಜಿಲ್ಲಾಡಳಿತ ಕಾರವಾರದ ಇಂಡಿಯನ್ ನೇವಿ ಇವರ ಸಹಾಯ ಕೇಳಿ ಹೆಲಿಕಾಪ್ಟರ್ ಮೂಲಕ ಕುಮಟಾದ ಸಮುದ್ರದಲ್ಲಿ ಶವದ ಹುಡುಕಾಟ ನಡೆಸುತ್ತಿರುವಾಗ ಹೆಲಿಕಾಪ್ಟರ್ ರೆಕ್ಕೆಯ ಗಾಳಿ ರಭಸಕ್ಕೆ ಆನಂದನ ಶವ ನೀರಿನಿಂದ ಮೇಲೆ ತೇಲಿ ಬಂದಿದೆ ಎನ್ನಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಕುಮಟಾ ಪೋಲಿಸ್ ಸಿಬ್ಬಂದಿಗಳು ಹಾಗೂ ಕರಾವಳಿ ಪೋಲಿಸ್ ಸಿಬ್ಬಂದಿಗಳು ಕುಮಟಾದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರವಾರದ ಇಂಡಿಯನ್ ನೇವಿ ಮತ್ತು ಸ್ಥಳೀಯ ಊರಿನ ನಾಗರಿಕರು ಆನಂದನ ಶವದ ಹುಡುಕಾಡಕ್ಕೆ ಸಹಕರಿಸಿದರು. ನಾಲ್ಕನೇ ದಿನದ ಹುಡುಕಾಟದಲ್ಲಿ ಕೊಳೆತ ಶವ ಸಿಕ್ಕಾಗ ಕುಟುಂಬಕ್ಕೆ ಆಘಾತ ಉಂಟಾಯಿತು. ಕುಟುಂಬ ದುಃಖದ ಮಡುವಿನಲ್ಲಿ ಒದ್ದಾಡುತ್ತಿದೆ.

ಪೋಲೀಸರು ಹಾಗೂ ಜಿಲ್ಲಾಡಳಿತ ಕೈಗೊಂಡ ಕಾರ್ಯ ಯಶಸ್ವಿಯಾಗಿದ್ದು ಪೋಲೀಸರು ಈ ಬಗ್ಗೆ ಮುಂದಿನ‌ಕಾರ್ಯ ಕೈಗೊಂಡಿದ್ದಾರೆ.