Home Economy ಉದ್ಘಾಟನೆಯಾಗಲಿದೆ ಉದಯ ಸಮೂಹ ಸಂಸ್ಥೆಯ ೧೦ನೇ ವೈಶಿಷ್ಟ್ಯಪೂರ್ಣ ಮಾರಾಟ ಮಳಿಗೆ.

ಉದ್ಘಾಟನೆಯಾಗಲಿದೆ ಉದಯ ಸಮೂಹ ಸಂಸ್ಥೆಯ ೧೦ನೇ ವೈಶಿಷ್ಟ್ಯಪೂರ್ಣ ಮಾರಾಟ ಮಳಿಗೆ.

SHARE

ಕುಂದಾಪುರ: ಗೃಹೋಪಕರಣ, ಹೋಟೆಲ್- ಕ್ಯಾಟರಿಂಗ್ ಹಾಗೂ ದಿನಬಳಕೆಯ, ಅಡುಗೆ ಮನೆಯ ಸಾಮಗ್ರಿಗಳು ಹಾಗೂ ಇನ್ನಿತರೆ ವೆರೈಟಿ ಸಾಮಾನುಗಳ ಮಹಾ ಸಂಗ್ರಹ ಹೊಂದಿ ಅಭೂತಪೂರ್ವವಾಗಿ ಮುನ್ನಡೆಯುತ್ತಿರುವ ಉದಯ ಸಮೂಹ ಸಂಸ್ಥೆಯ ವೈಶಿಷ್ಟ್ಯ ಹಾಗೂ ವಿನೂತನ ಶಾಖೆ “ಉದಯ ಕಿಚನೆಕ್ಸ್ಟ” ವೈಶಿಷ್ಟ್ಯ ಪೂರ್ಣ ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭ ಹಾಗೂ ವಿಶೇಷ ರಿಯಾಯಿತಿ ದರದ ಮಾರಾಟ ದಿನಾಂಕ ೯ ಅಗಸ್ಟ ೨೦೧೮ ರ ಬೆಳಿಗ್ಗೆ ನಡೆಯಲಿದೆ .

ಕುಂದಾಪುರದ ಶಂಕರ ಶೇಟ್ ಟವರ್ಸ್, ಪಾರಿಜಾತ ಹೋಟೆಲ್ ಸಮೀಪ ಮುಖ್ಯ ರಸ್ತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ . ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಜನರಲ್ ಮ್ಯಾನೇಜರ್ ಆದ ಶ್ರೀ ಭಾಸ್ಕರ್ ಹಂದೆ ದೀಪ ಬೆಳಗಿಸುವರು .

ಕುಂದಾಪುರದ ನಗರಸಭಾ ಅಧ್ಯಕ್ಷರಾದ ಶ್ರೀಮತಿ ವಸಂತಿ ಮೋಹನ್ ಸಾರಂಗ, ರೋಟರಿ ಜಿಲ್ಲಾ ಗವರ್ನರ್ ರೋ. ಅಭಿನಂದನ್ ಎ. ಶೆಟ್ಟಿ , ಶಂಕರ್ ಶೇಟ್ ಟವರ್ಸ್ ಕಟ್ಟಡದ ಮಾಲಕರಾದ ಶ್ರೀಮತಿ ಸುಂದರಿ ಎ ಶೇಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು .

ಈ ಕಾರ್ಯಕ್ರಮಕ್ಕೆ ಶ್ರೀ ರಮೇಶ್ ಬಂಗೇರ ಹಾಗೂ ಆಡಳಿತ ವರ್ಗ ಹಾಗೂ ನೌಕರ ವೃಂದದವರು ಕುಂದಾಪುರ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಸಮಸ್ತ ಜನತೆಯನ್ನು ಆಹ್ವಾನಿಸುತ್ತಿದ್ದಾರೆ .