Home Local ಮಹಾಗಣಪತಿಯ ಮೊರೆಹೋದ ಉಪಮುಖ್ಯಮಂತ್ರಿ : ಇಡಗುಂಜಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಜಿ. ಪರಮೇಶ್ವರ್.

ಮಹಾಗಣಪತಿಯ ಮೊರೆಹೋದ ಉಪಮುಖ್ಯಮಂತ್ರಿ : ಇಡಗುಂಜಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಜಿ. ಪರಮೇಶ್ವರ್.

SHARE

ಹೊನ್ನಾವರ : ಇಂದು ತಾಲೂಕಿನ ಶಕ್ತಿಕ್ಷೇತ್ರ ಇಡಗುಂಜಿಗೆ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಡಾ ಜಿ ಪರಮೇಶ್ವರ್ ಆಗಿಸಿದ್ದು ಬಿಗಿ ಭದ್ರತೆ ನಡುವೆ ಪೂಜಾ ಕೈಂಕರ್ಯ ನರವೇರಿಸಿದರು.

ಪ್ರಸಿದ್ಧ ಶಕ್ತಿ ಕ್ಷೇತ್ರ ಇಡಗುಂಜಿ ದೇವಸ್ಥಾನಕ್ಕೆ ಆಗಮಿಸಿದ ಪರಮೇಶ್ವರ್ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು . ವೈದಿಕರು ಹಾಗೂ ಪ್ರಧಾನ ಅರ್ಚಕರು ಈ ಪೂಜಾ ಕಾರ್ಯ ನಡೆಸಿಕೊಟ್ಟರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜ್ಯದ ಹಿತವನ್ನು ಕಾಪಾಡುವುದಕ್ಕೆ ರಾಜ್ಯದ ಜನರ ಸಂಕಷ್ಟವನ್ನು ದೂರ ಮಾಡುವುದಕ್ಕೆ ನಾನು ಇಡಗುಂಜಿ ಗಣಪತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು .

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶಾರದಾ ಶೆಟ್ಟಿ, ಮಂಕಾಳ ಎಸ್ ವೈದ್ಯ ಇದ್ದರು. ಕಾಂಗ್ರೆಸ್ ಪ್ರಮುಖರಾದ ರವಿಕುಮಾರ ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕ, ತಾಲೂಕಾ ಅಧ್ಯಕ್ಷ ಜಗದೀಪ ತೆಂಗೇರಿ ಹಾಗೂ ಇನ್ನಿತರರು ಹಾಜರಿದ್ದರು.