Home Local ಟಿ.ಎಸ್.ಎಸ್. ಸುಪರ್ ಮಾರ್ಕೆಟ್‍ನಲ್ಲಿ “ಸ್ವಾದ ವೈವಿಧ್ಯ”: ಕಡುಬನ್ನು ಸ್ಥಳದಲ್ಲೇ ತಯಾರಿಸುವ ಸ್ಪರ್ಧೆ

ಟಿ.ಎಸ್.ಎಸ್. ಸುಪರ್ ಮಾರ್ಕೆಟ್‍ನಲ್ಲಿ “ಸ್ವಾದ ವೈವಿಧ್ಯ”: ಕಡುಬನ್ನು ಸ್ಥಳದಲ್ಲೇ ತಯಾರಿಸುವ ಸ್ಪರ್ಧೆ

SHARE

ಶಿರಸಿ :ಟಿ.ಎಸ್.ಎಸ್. ಸುಪರ್ ಮಾರ್ಕೆಟ್‍ನಲ್ಲಿ ನಡೆಯುತ್ತಿರುವ “ಸ್ವಾದ ವೈವಿಧ್ಯ” ಸ್ಥಳದಲ್ಲೇ ಅಡುಗೆಮಾಡುವ ಸ್ಪರ್ಧಾ ಸರಣಿಯ ತೃತೀಯ ಸ್ಪರ್ಧೆಯ ಪ್ರಯುಕ್ತ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಸಿಹಿ ತಿಂಡಿಯಾದ ಕಡುಬನ್ನು ಸ್ಥಳದಲ್ಲೇ ತಯಾರಿಸುವ ಸ್ಪರ್ಧೆಯನ್ನು ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಶ್ರೀಮತಿ ಲೀಲಾವತಿ ದಿವಾಕರ ಹೆಗಡೆ ಗಡಿಮನೆ ಪ್ರಥಮ ಸ್ಥಾನ ಹಾಗೂ ಶ್ರೀಮತಿ ರೇಣುಕಾ ಶ್ರೀಪತಿ ಭಟ್ಟ ಬ್ಯಾಗದ್ದೆ ದ್ವಿತೀಯ ಸ್ಥಾನಗಳಿಸಿದ್ದಾರೆ. ಐವರು ಸ್ಪರ್ಧಾಳುಗಳು ಭಾಗವಹಿಸಿದ್ದ ಈ ಸ್ಪರ್ಧೆಗೆ ಶಿರಸಿಯ ನಿಸರ್ಗ ಆಸ್ಪತ್ರೆಯ ಖ್ಯಾತ ವೈದ್ಯರಾದ ಶ್ರೀ ವೆಂಕಟ್ರಮಣ ಹೆಗಡೆ, ಹಾಗೂ ಶಿರಸಿಯ ತೋಟಗಾರಿಕಾ ಸಂಶೋಧನಾ & ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕರಾದ ಮಂಜು ಎಮ್.ಜೆ. ನಿರ್ಣಾಯಕರಾಗಿ ತೀರ್ಪು ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ, ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ವಿ. ವಿ. ಹೆಗಡೆ ಬಾಳೇಹದ್ದ, ಶ್ರೀ ಆರ್.ಆರ್. ಹೆಗಡೆ ಐನಕೈ ಹಾಗೂ ಸಂಘದ ಪ್ರಧಾನ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.