Home Local ಮುರುಡೇಶ್ವರದ ಬೈಲೂರು ಬಳಿ ಭೀಕರ ಅಪಘಾತ : ಸ್ಥಳದಲ್ಲೇ ಹಾರಿ ಹೋಯ್ತು ಮೂವರ ಪ್ರಾಣ

ಮುರುಡೇಶ್ವರದ ಬೈಲೂರು ಬಳಿ ಭೀಕರ ಅಪಘಾತ : ಸ್ಥಳದಲ್ಲೇ ಹಾರಿ ಹೋಯ್ತು ಮೂವರ ಪ್ರಾಣ

SHARE

ಭಟ್ಕಳ : ಪ್ಯಾಸೆಂಜರ್ ಟೆಂಪೊ ಹಾಗೂ ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಬೈಕ್ ಸ್ಫೋಟಗೊಂಡ ಘಟನೆ ತಾಲೂಕಿನ ಮುರ್ಡೇಶ್ವರ ಸಮೀಪ ಸಂಭವಿಸಿದೆ.

ಮುರ್ಡೇಶ್ವರದ ಬೈಲೂರಿನ‌ ಸಮೀಪ ಸಂಭವಿಸಿದ ಅಪಘಾತದಲ್ಲಿ ಬೈಕಿನಲ್ಲಿ ಇದ್ದ ಪುಟ್ಟ ಬಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು‌ವರದಿಯಾಗಿದೆ.

ಮೃತಪಟ್ಟವರನ್ನು ಕುಮಟಾದ ನಿವಾಸಿ ಅಭಿಷೇಕ ನಾಯ್ಕ ಹಾಗೂ ಅನಂತವಾಡಿ ನಿವಾಸಿಗಳು ಸಂದೀಪ ಗೌಡ ಸಂಗೀತ ಗೌಡ ಎಂದು ಗುರುತಿಸಲಾಗಿದೆ. ಮಂಕಿ ಪೊಲೀಸ್ ಹಾಗೂ ಮುರುಡೇಶ್ವರದ ಪೋಲೀಸರು ಆಗಮಿಸಿ ತನಿಖೆಯನ್ನು ಕೈಗೊಂಡಿದ್ದಾರೆ.