Home Local ಮಹಾತ್ಮಾ ಗಾಂಧಿ ಸ್ವಚ್ಛತಾ ಹಾಗೂ ಶ್ರಮದಾನ ಕಾರ್ಯಕ್ರಮ: ಹೊನ್ನಾವರ ಬಸ್ ತಂಗುದಾಣ ದಲ್ಲಿ ಶ್ರಮದಾನ

ಮಹಾತ್ಮಾ ಗಾಂಧಿ ಸ್ವಚ್ಛತಾ ಹಾಗೂ ಶ್ರಮದಾನ ಕಾರ್ಯಕ್ರಮ: ಹೊನ್ನಾವರ ಬಸ್ ತಂಗುದಾಣ ದಲ್ಲಿ ಶ್ರಮದಾನ

SHARE

ಹೊನ್ನಾವರ : ನೆಹರು ಯುವ ಕೇಂದ್ರ ಕಾರವಾರ, ಯುವ ಸಬಲೀಕರಣ ಕ್ರೀಢಾ ಇಲಾಖೆ ಹೊನ್ನಾವರ ತಾಲೂಕಾ ಯುವ ಒಕ್ಕೂಟ ಹೊನ್ನಾವರ ಹಾಗೂ ಅದ್ವೈತ ಸ್ಪೋಟ್ರ್ಸ್ ಕ್ಲಬ್ (ರಿ.) ಹೊನ್ನಾವರ ಇವರ ಸಂಯುಕ್ತಾಶ್ರಯದಲ್ಲಿ ಮಹಾತ್ಮಾ ಗಾಂಧಿ ಸ್ವಚ್ಛತಾ ಹಾಗೂ ಶ್ರಮದಾನ ಕಾರ್ಯಕ್ರಮ ಅಂಗವಾಗಿ ಹೊನ್ನಾವರ ಬಸ್ ತಂಗುದಾಣವನ್ನು ಸ್ವಚ್ಚಗೊಳಿಸಲಾಯಿತು.

ಬಸ್ ತಂಗುದಾಣದಲ್ಲಿರುವ ನೀರಿನ ಟ್ಯಾಂಕ್, ಸುತ್ತ ಮುತ್ತಲಿರುವ ಬಸ್‍ಸ್ಟಾಂಡ್ ಎದುರುಗಡೆ ಕಸ, ಕೊಳಚೆಗಳ ಸ್ವಚ್ಛತೆ ತಂಗುದಾಣದ ಕುಳಿತುಕೊಳ್ಳುವ ಆಸನಗಳು ಮತ್ತು ಆಟೋ ರಿಕ್ಷಾ ನಿಲ್ದಾಣ ಕಂಪೌಂಡ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ರೋಟರೀ ಕ್ಲಬ್ ಅಧ್ಯಕ್ಷರಾದ ಡಾ. ರಂಗನಾಥ ಪೂಜಾರಿ, ಪ.ಪಂ. ಅಧ್ಯಕ್ಷೆ ರಾಜಶ್ರೀ ನಾಯ್ಕ, ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಶಿವರಾಜ ಮೇಸ್ತ, ಜಿ.ಪಿ. ಪಾಠಣಕರ್, ಯುವ ಸಬಲೀಕರಣ ತಾಲೂಕಿನ ಕ್ರೀಢಾಧಿಕಾರಿ ಸುಧೀಶ ನಾಯ್ಕ, ತಾಲೂಕಾ ಯುವ ಒಕ್ಕೂಟ ಅಧ್ಯಕ್ಷರಾದ ವಿನಾಯಕ ನಾಯ್ಕ ಹಾಗೂ ಅದ್ವೈತ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷರಾದ ರಾಘವೇಂದ್ರ ಮೇಸ್ತ ಸಾಕ್ಷರತಾ ಸಂಯೋಜಕರಾದ ಶಿಕ್ಷಕಿ ಸಾಧನಾ ಬರ್ಗಿ ಅಂಗನವಾಡಿ ಶಿಕ್ಷಕಿಯಾದ ಮಹಾಲಕ್ಷ್ಮೀ ಗೌಡ, ಸಮಾಜ ಸೇವಕಿ ಸವಿತಾ ಮೇಸ್ತ, ಉಮೇಶ ತೇಲಂಗ ಹಾಗೂ ಅದ್ವೈತ ಸ್ಪೋಟ್ರ್ಸ್ ಕ್ಲಬ್‍ನ ಕ್ರೀಡಾಪಟುಗಳು ಸೇರಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.