Home Important ಇಂದು ಸಂಜೆ 5 ಗಂಟೆಗೆ ಸಕಲ ಸರಕಾರಿ‌ ಗೌರವಗಳೊಂದಿಗೆ ವಿಜಯ ಘಾಟ್ ನಲ್ಲಿ ಅಟಲ್‌ ಬಿಹಾರಿ...

ಇಂದು ಸಂಜೆ 5 ಗಂಟೆಗೆ ಸಕಲ ಸರಕಾರಿ‌ ಗೌರವಗಳೊಂದಿಗೆ ವಿಜಯ ಘಾಟ್ ನಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ.

SHARE

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ನಡೆದಿದೆ.ಇಂದು ಸಂಜೆ 5 ಗಂಟೆಗೆ ಸಕಲ ಸರಕಾರಿ‌ ಗೌರವಗಳೊಂದಿಗೆ ವಿಜಯ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.

ಗುರುವಾರು ಸಂಜೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವಾಜಪೇಯಿ ಮೃತದೇಹವನ್ನು ಕೃಷ್ಣಮೆನನ್ ರಸ್ತೆಯ ನಿವಾಸಕ್ಕೆ ಕೊಂಡೊಯ್ಯಲಾಯಿತು. ಪ್ರಧಾನಿ ನರೇಂದ್ರ ಮೋದಿ,ಮಾಜಿ ಉಪ ಪ್ರಧಾನಿ ಹಾಗು ವಾಜಪೇಯಿ ಅವರ ಒಡನಾಡಿ ಲಾಲ್‌ ಕೃಷ್ಣ ಅಡ್ವಾಣಿ, ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು,ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ,ಸೋನಿಯಾಗಾಂಧಿ,ಮಾಜಿ ಪ್ರಧಾನಿ ಮನಮೋಹನ್ ಸಿಂಗ್,ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ,ಬಿಜು ಜನತಾದಳ ನಾಯಕ ನವೀನ್ ಪಟ್ನಾಯಕ್ ಸೇರಿದಂತೆ ರಾಜಕೀಯ ಧುರೀಣರೆಲ್ಲರೂ ವಾಜಪೇಯಿ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಮಧ್ಯಾಹ್ನ 12 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ಅಂತಿಮ‌ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ 5 ಗಂಟೆಗೆ ಸಕಲ ಸರಕಾರಿ ಗೌರವಗಳೊಂದಿಗೆ ವಿಜಯ ಘಾಟ್ ನಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ಬೆಳಗ್ಗೆ ವಾಜಪೇಯಿ ಅಂತಿಮ ದರ್ಶನ ಮಾಡಲಿದ್ದಾರೆ.ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕೂಡ ಬೆಳಗ್ಗೆ ದೆಹಲಿಗೆ ತೆರಳಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಕೆ ಮಾಡಲಿದ್ದಾರೆ.