Home Local ಐತಿಹಾಸಿಕ ಮಿರ್ಜಾನ್ ಕೋಟೆಗೆ ತೆರಳುವ ರಸ್ತೆ ಸರಿಪಡಿಸಲು ಮನವಿ: ಶಾಸಕರಿಂದ ಸಿಕ್ಕಿದೆ ಭರವಸೆ.

ಐತಿಹಾಸಿಕ ಮಿರ್ಜಾನ್ ಕೋಟೆಗೆ ತೆರಳುವ ರಸ್ತೆ ಸರಿಪಡಿಸಲು ಮನವಿ: ಶಾಸಕರಿಂದ ಸಿಕ್ಕಿದೆ ಭರವಸೆ.

SHARE

ಕುಮಟಾ: ತಾಲೂಕಿನ ಮಿರ್ಜಾನ್ ಹೃದಯ ಭಾಗವಾಗಿರುವ ಮಿರ್ಜಾನ್ ಕೋಟೆಗೆ ಹೋಗುವ ಛತ್ರ ಕೂರ್ವೆ ರಸ್ತೆ ಹಾಳಾಗಿದ್ದು ಅದನ್ನು ಸರಿಪಡಿಸುವ ಕಾರ್ಯವಾಗಬೇಕು ಎಂದು ಸಾರ್ವಜನಿಕರು ಅನೇಕ ದಿನಗಳಿಂದ ಹಪಹಪಿಸುತ್ತಿದ್ದರು.

ಇಂದು ಈ ರಸ್ತೆ ಸರಿಪಡಿಸುವಂತೆ ಛತ್ರ ಕುರ್ವೆ ಗ್ರಾಮಸ್ತರು ಮಾನ್ಯ ಶಾಸಕ ದಿನಕರ ಶೆಟ್ಟಿಯವರಿಗೆ ಮನವಿ ನೀಡಿದರು.ಛತ್ರಕೂರ್ವೆ ಗ್ರಾಮಸ್ಥರು ಮಿರ್ಜಾನ ಕೋಟೆ ರಸ್ತೆ ಹದಗೆಟ್ಟಿದ್ದು ಅದನ್ನು ಮರು ಡಾಂಬರಿಕರಣ ಮಾಡಿ ಕೊಡಬೇಕಾಗಿ ಮಾನ್ಯ ಶಾಸಕರಿಗೆ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಮಂಜು ಪಟಗಾರ ಚಿತ್ರಿಗಿ ,‌ದಯಾನಂದ ಪಟಗಾರ , ಶಿವಾನಂದ ಪಟಗಾರ, ಲೋಕೇಶ್ ಪಟಗಾರ, ಗಣೇಶ ಪಟಗಾರ, ಕುಮಾರ ಪಟಗಾರ, ಗೋವಿಂದ, ಕುಮಾರ, ಭರತ, ರತ್ನಾಕರ, ಅರುಣ, ಮಹೇಂದ್ರ ಇತರರು ಹಾಜರಿದ್ದರು.

ಸದ್ಯದಲ್ಲೇ ಡಾಂಬರಿಕರಣ ಮಾಡಿ ಕೊಡುವುದಾಗಿ ಶಾಸಕರಿಂದ ಭರವಸೆ ದೊರೆತಿದೆ ಎನ್ನಲಾಗಿದ್ದು ಶಾಸಕರು ಎಷ್ಟರಮಟ್ಟಿಗೆ ಎಷ್ಟು ವೇಗವಾಗಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.