Home Important ಜನರ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ದೇವರ ಕೆಲಸದಂತೆ ಕಾರ್ಯಮಾಡಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಜನರ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ದೇವರ ಕೆಲಸದಂತೆ ಕಾರ್ಯಮಾಡಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

SHARE

ಮಡಿಕೇರಿ: ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗಿನ ಜನರ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ದೇವರ ಕೆಲಸದಂತೆ ಅಧಿಕಾರಿಗಳು ಕಾರ್ಯಪ್ರವೃತ್ತ ರಾಗುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಇನ್ನು ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್ ಗಳಲ್ಲಿ ಆಶ್ರಯ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿ ಜಿಲ್ಲೆಯಲ್ಲಿ ಕೈಗೊಂಡ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ, ಸಮಸ್ಯೆ ಪರಿಹಾರ ಸಂಬಂಧ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದ್ದು, ಜನತೆಯ ಕಣ್ಣೀರು ಒರೆಸುವುದು ಮುಖ್ಯವಾಗಬೇಕೆಂದು ಸೂಚಿಸಿದರು.

ಮನೆ ಕಳೆದುಕೊಂಡ ಬಡವರನ್ನು ಸಮುದಾಯ ಭವನಗಳಲ್ಲಿ ಹೆಚ್ಚು ದಿನ ಇಟ್ಟುಕೊಳ್ಳಲೂ ಕಷ್ಟಸಾಧ್ಯವಾಗಲಿದೆ. ಸಂತ್ರಸ್ಥರಿಗೆ ಶಾಶ್ವತವಾದ ಸೂರು ನೀಡುವ ಸಂಬಂಧಿತ ಇನ್ನು ಮೂರು ದಿನಗಳಲ್ಲಿ ಸರ್ಕಾರಿ ಜಾಗ ಗುರುತಿಸಿ ಶೆಡ್ ನಿರ್ಮಾಣ ಮಾಡಬೇಕು ಎಂದು ಆದೇಶಿಸಿದರು. ಶಾಶ್ವತವಾಗಿ ಮನೆ ನಿರ್ಮಾಣಕ್ಕೆ 4 ತಿಂಗಳಾದರೂ ಬೇಕಾದೀತು ಎಂದೂ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ನಿರಾಶ್ರಿತರಿಗೆ ಸೌಕರ್ಯ ಕಲ್ಪಿಸುವ ಸಂದರ್ಭ ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಕಪ್ಪುಚುಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕು. ಸರ್ಕಾರ ಪುನರ್ ವಸತಿ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಸೌಕರ್ಯ ನೀಡುತ್ತಿದೆ. ಈಗಾಗಲೇ ಕೇಂದ್ರಗಳಿಗೆ 120 ಸಂಚಾರಿ ಶೌಚಾಲಯ ರವಾನಿಸಲಾಗಿದೆ. ಇವುಗಳಿಗೆ ನೀರಿನ ಸಂಪರ್ಕ ನೀಡಿ ಸೋಮವಾರದಿಂದಲೇ ಬಳಕೆಗೆ ಯೋಗ್ಯವಾಗುವಂತೆ ನೋಡಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.

ಜಿಲ್ಲೆಯಲ್ಲಿ ಸಂಪಕ9 ಕಳೆದುಕೊಂಡ ರಸ್ತೆಗಳಿಗೆ ಮರುಸಂಪಕ9ಕ್ಕೆ ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮಾರೋಪಾದಿಯಲ್ಲಿ ಕಾರ್ಯಪ್ರವೃತರಾಗಿ ಎಂದು ಸೂಚಿಸಿದ ಕುಮಾರಸ್ವಾಮಿ, ಜಿ.ಪಂ. ಸೇರಿದ ರಸ್ತೆಗಳಲ್ಲಿನ ದುರಸ್ಥಿ ಕಾಯ9ಗಳನ್ನೂ ಕೈಗೊಳ್ಳಿ ಎಂದೂ ಹೇಳಿದರು.

ತಾನು ಈವರೆಗೆ ಕೊಡಗಿನ ಅಭಿದ್ಧಿಗೆ ನೀಡಿರುವ ಯೋಜನೆಗಳೇ ಒಂದು ರೀತಿಯಲ್ಲಿದ್ದರೆ ಇದೀಗ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗಿಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಯೋಜನೆಗಳೇ ಮತ್ತೊಂದು ರೀತಿಯಾದ್ದಾಗಿರುತ್ತದೆ ಎಂದೂ ಕುಮಾರಸ್ವಾಮಿ ತಿಳಿಸಿದರು.