Home Local 20ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥ: ಕಲುಷಿತ ನೀರು ಸೇವನೆ.

20ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥ: ಕಲುಷಿತ ನೀರು ಸೇವನೆ.

SHARE

ಕಾರವಾರ: ಹೊರ ರಾಜ್ಯದ ಸುಮಾರು 20ಕ್ಕೂ ಅಧಿಕ ಕಾರ್ಮಿಕರುಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಕೋಲ್ ಬಂದರಿನಲ್ಲಿ ನಡೆದಿದೆ.

ಬೈತಕೋಲ್ ಬಂದರಿಗೆ ನಗರಸಭೆ ಟ್ಯಾಂಕರ್ ಮೂಲಕ ಸರಬರಾಜಾಗಿದ್ದ ನೀರು ಕುಡಿದ ಪರಿಣಾಮ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ಮಿಕರು ಕಳೆದೆರಡು ದಿನಗಳಿಂದ ಟ್ಯಾಂಕರ್ ನೀರನ್ನೇ ಕುಡಿಯಲು ಬಳಸುತ್ತಿದ್ದರು ಎಂದು ತಿಳಿದುಬಂದಿದೆ.

ಕಾರವಾರದ ಸರಕಾರಿ ಆಸ್ಪತ್ರೆಗಯಲ್ಲಿ ಅಸ್ವಸ್ಥರಾಗಿರುವ ಕಾರ್ಮಿಕರನ್ನು ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.