Home Local ಅಟಲ್ ಚಿತಾಭಸ್ಮದ ಮೆರವಣಿಗೆ: ಮೌನ ಮೆರವಣಿಗೆ ಮೂಲಕ ನಮನ ಸಲ್ಲಿಸಿದ ಕುಮಟಾ ಜನತೆ.

ಅಟಲ್ ಚಿತಾಭಸ್ಮದ ಮೆರವಣಿಗೆ: ಮೌನ ಮೆರವಣಿಗೆ ಮೂಲಕ ನಮನ ಸಲ್ಲಿಸಿದ ಕುಮಟಾ ಜನತೆ.

SHARE

ಕುಮಟಾ: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಹೊನ್ನಾವರದಲ್ಲಿ ಶರಾವತಿ ನದಿಯಲ್ಲಿ ತೇಲಿಬಿಡಲು ಚಿತಾಭಸ್ಮ ವನ್ನು ಹೊತ್ತ ವಾಹನ ಕುಮಟಾಕ್ಕೆ ಬರುತ್ತಿದ್ದಂತೆ ಕುಮಟಾದ ಶಹರದೊಳಗೆ ಅಭಿಮಾನಿ ನಾಗರಿಕರು ಮೌನ ಮೆರವಣಿಗೆ ಮೂಲಕ ಈ ವಾಹನದೊಂದಿಗೆ ತೆರಳಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಅಟಲ್ ಜಿ ಯವರ ಚಿತಾಭಸ್ಮವನ್ನು ನಿನ್ನೆ ಕುಮಟಾ ಬಿಜೆಪಿ ಕಛೇರಿಯಲ್ಲಿ ಇಡಲಾಗಿತ್ತು . ಇದೀಗ ಮೆರವಣಿಗೆ ಮೂಲಕ ಕುಮಟಾ ಪಟ್ಟಣ ಸಂಚರಿಸಿದ ವಾಹನ ಹೊನ್ನಾವರಕ್ಕೆ ತೆರಳಿತು.

ವಾಹನವನ್ನು ಕುಮಟಾ ಹೊನ್ನಾವರ ಶಾಸಕರಾದ ಶಾಸಕ ದಿನಕರ ಶೆಟ್ಟಿಯವರೇ ಚಲಾಯಿಸಿ ಹಿರಿಯ ಮುತ್ಸದ್ದಿಗೆ ಅಂತಿಮ‌ನಮನ ಸಲ್ಲಿಸಿದರು.

ಶಾಸಕಿ ರೂಪಾಲಿ ನಾಯ್ಕ,ಕೆ.ಜಿ ನಾಯ್ಕ, ಹಾಗೂ ಬಿಜೆಪಿ ಪ್ರಮುಖರಾದ ಜಿ.ಜಿ ಹೆಗಡೆ, ಹೇಮಂತ ಗಾಂವ್ಕರ್, ಹಾಗೂ ಇನ್ನಿತರರು ಹಾಜರಿದ್ದರು.