Home Local ಅತಿವೃಷ್ಟಿಯಿಂದ ಅಡಿಕೆಗೆ ಕೊಳೆರೋಗ: ಕುಮಟಾ ರೈತರಿಂದ ಪರಿಹಾರಕ್ಕಾಗಿ ಮನವಿ ಸಲ್ಲಿಕೆ.

ಅತಿವೃಷ್ಟಿಯಿಂದ ಅಡಿಕೆಗೆ ಕೊಳೆರೋಗ: ಕುಮಟಾ ರೈತರಿಂದ ಪರಿಹಾರಕ್ಕಾಗಿ ಮನವಿ ಸಲ್ಲಿಕೆ.

SHARE

ಕುಮಟಾ: ಅತಿವೃಷ್ಟಿಯಿಂದ ಅಡಿಕೆಗೆ ಕೊಳೆ ರೋಗ ತಗುಲಿ ಬೆಳೆಗಾರರು ಕಂಗಾಲಾಗಿದ್ದಾರೆ,ಅಪಾರ ನಷ್ಟ ಅನುಭವಿಸುವಂತಾಗಿದೆ.ಇದರಿಂದಾಗಿ ಯೋಗ್ಯ ಪರಿಹಾರವನ್ನು ಸರಕಾರ ನೀಡಬೇಕಿದೆ . ಈ ಬಗ್ಗೆ ಸರಕಾರದ ಕಣ್ಣು ತೆರೆಸುವ ದೃಷ್ಟಿಯಿಂದ ಹಾಗೂ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಬೇಡವೆಂದು ವಿನಂತಿಸಲಾಯಿತು. ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಗಳಂತೇ ಉತ್ತರಕನ್ನಡದ ಕರಾವಳೀ ತಾಲೂಕು ಗಳಲ್ಲಿಯೂ ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಹಾನಿಯಾಗಿದ್ದು ಶೀಘೃವಾಗಿ ಯೋಗ್ಯ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಕುಮಟಾ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕ ದಿನಕರ ಶೆಟ್ಟಿಯವರು.ನಾನು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಈ ಬಗ್ಗೆ ಅವರಿಗೆ ವಿವರಿಸುತ್ತೇನೆ.ಆದರೂ ನ್ಯಾಯ ಸಿಗದಿದ್ದಲ್ಲಿ ಬೆಳೆಗಾರರೊಂದಿಗೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಮಾಧ್ಯಮದ ಮೂಲಕ ತಿಳಿಸಿ ತಾವು ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರ ಜೊತೆಗಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಅಡಿಕೆ ಬೆಳೆಗಾರರು ತಮ್ಮ ತಮ್ಮ ಅಡಿಕೆ ತೋಟದಲ್ಲಿ ಉದುರಿದ ಅಡಿಕೆಗಳನ್ನು ತಂದು ಪ್ರದರ್ಶಿಸಿ ತಮ್ಮ ನೋವನ್ನು ತೋಡಿಕೊಂಡರು.

ವರದಿ : ಜಯದೇವ ಬಳಗಂಡಿ,
9448302509.
“ಸತ್ವಾಧಾರಾ ನ್ಯೂಸ್”