Home Local ಶರಾವತಿಯ ಒಡಲು ಸೇರಿದ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮ

ಶರಾವತಿಯ ಒಡಲು ಸೇರಿದ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮ

SHARE

ಹೊನ್ನಾವರ: ಮಾಜಿ ಪ್ರಧಾನಿ ವಾಜಪೇಯಿ ಜೀ ರವರ ಅಸ್ಥಿ ವಿಸರ್ಜನೆ ಹೊನ್ನಾವರದ ಶರಾವತಿ ನದಿಯ ಸಂಗಮದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಕುಮಟಾ ಬಿಜೆಪಿ ಕಛೇರಿಯಿಂದ ಮೆರವಣಿಗೆ ಅಸ್ಥಿ ಹೊತ್ತ ವಾಹನ ಕುಮಟಾ ನಗರದಲ್ಲಿ ಮೆರವಣಿಗೆ ಮೂಲಕ ಸಾಗಿ ನಂತರ ಹೊನ್ನಾವರಕ್ಕೆ ಸಾಗಿತು.

ಜಿಲ್ಲಾಧ್ಯಕ್ಷರು, ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ, ಭಟ್ಕಳ ಶಾಸಕ ಸುನೀಲ ನಾಯ್ಕ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು, ಕುಮಟಾ ಹೊನ್ನಾವರ ಮಂಡಳ ಅಧ್ಯಕ್ಷರು ಪಕ್ಷದ ಮುಖಂಡರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕುಮಟಾ ನಗರದ ಸಾರ್ವಜನಿಕರು ಅಲ್ಲಲ್ಲಿ ಚಿತಾಭಸ್ಮಕ್ಕೆ ಪುಷ್ಪ ಸಮರ್ಪಣೆ ಮಾಡಿದರು. ಕುಮಟಾ ಶಾಸಕ ದಿನಕರ ಶೆಟ್ಟಿ ಯವರು ಚಿತಾಭಸ್ಮದ ವಾಹನವನ್ನು ತಾವೇ ಸ್ವತಃ ಚಲಾಯಿಸಿದ್ದು ವಿಶೇಷವಾಗಿತ್ತು..