Home Local ಸಾರಿಗೆ ಬಸ್ ಅಪಘಾತ: ಕಾರವಾರದ ಸಬ್ ಇನ್ಸ್ ಪೆಕ್ಟರ್ ಸೇರಿ ಮೂವರ ದುರ್ಮರಣ.

ಸಾರಿಗೆ ಬಸ್ ಅಪಘಾತ: ಕಾರವಾರದ ಸಬ್ ಇನ್ಸ್ ಪೆಕ್ಟರ್ ಸೇರಿ ಮೂವರ ದುರ್ಮರಣ.

SHARE

ಶಿರಾ- ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಹಾಗೂ ಸೀಬರ್ಡ್ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸೀಬರ್ಡ್ ಬಸ್ ಚಾಲಕ ಧನರಾಜ್ (54), ಅದರಲ್ಲಿದ್ದ ಬೆಂಗಳೂರಿನ ನಿಖಿತಾ (27), ಸಾರಿಗೆ ಬಸ್ ನಲ್ಲಿದ್ದ ಕಾರವಾರದ ಡಿಎಆರ್ ಸಬ್ ಇನ್ಸ್‌ಪೆಕ್ಟರ್ ರಮೇಶ್ ನಾಯ್ಕ (48) ಮೃತಪಟ್ಟವರು.

ಶಿರಾದ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಬಳಿ ಸಾರಿಗೆ ಬಸ್ ಗೆ ಸೀಬರ್ಡ್ ಬಸ್ ಡಿಕ್ಕಿಯಾಗಿದೆ. ಸುಮಾರು ಹತ್ತು ಮಂದಿಗೆ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.