Home Local ಬಾಡ ವಲಯ ಪ್ರತಿಭಾ ಕಾರಂಜಿಯಲ್ಲಿ ಚಿತ್ರಿಗಿ ಪ್ರೌಢಶಾಲೆ ಅತ್ಯುತ್ತಮ ಸಾಧನೆ.

ಬಾಡ ವಲಯ ಪ್ರತಿಭಾ ಕಾರಂಜಿಯಲ್ಲಿ ಚಿತ್ರಿಗಿ ಪ್ರೌಢಶಾಲೆ ಅತ್ಯುತ್ತಮ ಸಾಧನೆ.

SHARE

ಕುಮಟಾ: ಇತ್ತೀಚೆಗೆ ತೌಹಿದ್ ಹೈಸ್ಕೂಲ್ ಕಾಗಾಲದಲ್ಲಿ ನಡೆದ ಬಾಡ ವಲಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಯಕ್ತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಗ್ರಗಣ್ಯರಾಗಿ ಹೊರಹೊಮ್ಮಿದ್ದಾರೆ.

ರಕ್ಷಿತಾ ಗೋಪಾಲ ಪಟಗಾರ, ವಿಶ್ವಾಸ ವೆಂಕಟೇಶ ಪೈ, ಗೌಸಿಯಾ ಮುಕ್ತಿಯಾರ್ ಸಾಬ್, ಸುಬ್ರಹ್ಮಣ್ಯ ವಿ.ಗುನಗಾ, ಚೈತ್ರಾ ರೋಹಿದಾಸ ನಾಯಕ, ಜ್ಯೋತಿ ವಸಂತ ಪಟಗಾರ ಕ್ರಮವಾಗಿ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕøತ, ಕೊಂಕಣಿ, ಮರಾಠಿ ಭಾಷಣ ಸ್ಪರ್ಧೆಗಳಲ್ಲಿ ಮೊದಲಿಗರಾಗಿ ವಿಜೇತರಾಗಿದ್ದಾರೆ.

ಹಾಗೆಯೇ ಪ್ರಜ್ಞಾ ಆಚಾರಿ, ಯೋಗಿನಿ ನಾಗೇಶ ನಾಯರ್, ನಿಶ್ಚಿತ್ ನಾಗರಾಜ ಹಿಣಿ, ಪ್ರಣೀತ ರವಿರಾಜ ಕಡ್ಲೆ, ದರ್ಶನ ಎಸ್.ನಾಯ್ಕ, ಸುಪ್ರಸನ್ನ ವಿ.ಗುನಗಾ ಇವರುಗಳು ಅನುಕ್ರಮವಾಗಿ ಭಾವಗೀತೆ, ಭರತನಾಟ್ಯ, ಛದ್ಮವೇಷ, ಆಶುಭಾಷಣ, ಮಿಮಿಕ್ರಿ ಮತ್ತು ಚರ್ಚಾಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನದಿಂದ ಮಿಂಚಿದ್ದಾರೆ. ಅಂತೆಯೇ, ತುಳು ಭಾಷಣದಲ್ಲಿ ತನುಜಾ ಎಸ್.ನಾಯ್ಕ ಹಾಗೂ ಜಾನಪದ ಗೀತೆಯಲ್ಲಿ ದರ್ಶನ ಪುರಾಣಿಕ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.

ಸಾಮೂಹಿಕ ವಿಭಾಗದ ದೃಶ್ಯಕಲೆ, ನಾಟಕೋತ್ವವ ಮತ್ತು ನೃತ್ಯ ಕಲೋತ್ವವದಲ್ಲೂ ವಿದ್ಯಾರ್ಥಿಗಳಾದ ಸುದರ್ಶನ ಸಂಗಡಿಗರು, ರಕ್ಷಿತಾ ಸಂಗಡಿಗರು ಹಾಗೂ ಸಿಂಚನಾ ಸಂಗಡಿಗರು ವಲಯದ ಇನ್ನಿತರ ಎಂಟು ಶಾಲಾ ಕಾಲೇಜುಗಳಿಗೆ ಪೈಪೋಟಿ ನೀಡಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಇವರ ಸಾಧನೆಗೆ ಮಾರ್ಗದರ್ಶನ ನೀಡಿದ ಪಾಲಕರು, ಶಿಕ್ಷಕ ವೃಂದದವರಿಗೆ ಮುಖ್ಯಾಧ್ಯಾಪಕ ಎನ್.ಆರ್.ಗಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.