Home Local ನಾಡುಮಾಸ್ಕೇರಿ ಹೈಸ್ಕೂಲಿನಲ್ಲಿ ಗೋಕರ್ಣ ವಲಯ ಪ್ರತಿಭಾಕಾರಂಜಿ

ನಾಡುಮಾಸ್ಕೇರಿ ಹೈಸ್ಕೂಲಿನಲ್ಲಿ ಗೋಕರ್ಣ ವಲಯ ಪ್ರತಿಭಾಕಾರಂಜಿ

SHARE

ಕುಮಟಾ: “ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಪ್ರತಿಭಾಕಾರಂಜಿ ವೇದಿಕೆಯನ್ನು ಕಲ್ಪಿಸಿಕೊಡುವುದರ ಜೊತೆಗೆ ಶಾಲೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ” ಎಂದು ನಾಡುಮಾಸ್ಕೇರಿ ಹೈಸ್ಕೂಲ್ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಅರುಣ ಬೀರಪ್ಪ ನಾಯ್ಕ ನುಡಿದರು.

ಅವರು ಜಿಲ್ಲಾ ಪಂಚಾಯತ್ ಉ.ಕ ,ಸಾರ್ವಜನಿಕ ಶಿಕ್ಷಣ ಇಲಾಖೆ ಉ.ಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ. ಸರ್ಕಾರಿ ಪ್ರೌಢಶಾಲೆ ನಾಡುಮಾಸ್ಕೇರಿ. ಹೈಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಾಡುಮಾಸ್ಕೇರಿ ಹೈಸ್ಕೂಲಿನಲ್ಲಿ ನಡೆದ ಗೋಕರ್ಣ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾಕಾರಂಜಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.“ಶಿಕ್ಷಣ ಮಕ್ಕಳ ಹಕ್ಕಾಗಿದೆ ಸಮಯ ಮತ್ತು ಗುರಿ ಇವೆರಡು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖವಾದದ್ದು” ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹನೀಫ್ ಸಾಬ್ “ಮಗು ಹೊಂದಿರುವ ವಿಶಿಷ್ಟ ಪ್ರತಿಭೆ ಗುರುತಿಸುವುದು ಮನರಂಜನೆ ನೀಡುವುದು ಮುಂತಾದ ಲಕ್ಷಣಗಳನ್ನು ಪ್ರತಿಭಾಕಾರಂಜಿ ಒಳಗೊಂಡಿದೆ.ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅತಿ ಅವಶ್ಯಕ ಕಾರ್ಯಕ್ರಮ ಪ್ರಯೋಜನ ಪಡೆದುಕೊಳ್ಳಿ” ಎಂದರು.

ನಾಡುಮಾಸ್ಕೇರಿ ಹೈಸ್ಕೂಲ್ ಮುಖ್ಯಾಧ್ಯಾಪಕಿ ಪದ್ಮಾ.ಎನ್.ನಾಯಕ “ಪ್ರತಿ ಮಗು ಒಂದಲ್ಲ ಒಂದು ರೀತಿಯ ಪ್ರತಿಭೆಯನ್ನು ಹೊಂದಿರುತ್ತದೆ.ಎಳವೆಯಲ್ಲಿಯೇ ಸೂಕ್ತ ಮಾರ್ಗದರ್ಶನ ಸಿಕ್ಕಾಗ ಮಾತ್ರ ಗರಿಷ್ಟಮಟ್ಟದ ಪ್ರಗತಿ ಕಾಣಲು ಸಾಧ್ಯ. ಸೂಪ್ತ ರೀತಿಯ ಪ್ರತಿಭೆ ಪ್ರೋತ್ಸಾಹಿಸಲಿಕ್ಕಾಗಿ ಇಲಾಖೆ ಜಾರಿಗೆ ತಂದ ನವೀನ ಯೋಜನೆ ಈ ಪ್ರತಿಭಾ ಕಾರಂಜಿ” ಎಂದರು.

ಪ್ರಶಾಂತ ನಾಯಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮಾತನಾಡಿ “ನಗುಮೊಗದ ಮಕ್ಕಳಿರುವ ಶಾಲೆಯೇ ಅರಳು ಹೂಗಳ ಉದ್ಯಾನ.ಶಿಕ್ಷಕ-ಬಾಲಕ-ಪಾಲಕರ ಹಳೆ ವಿದ್ಯಾರ್ಥಿ ಸಂಘ ಊರಿನ ದಾನಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಪ್ರತಿಭಾಕಾರಂಜಿಯೆಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ“ ಎಂದರು.ಕಾರ್ಯಕ್ರಮದ ವೇದಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಖ್ಯಾಧ್ಯಾಪಕರಾದ ನಾರಾಯಣ ನಾಯಕ ಉಪಸ್ಥಿತರಿದ್ದರು.

ಮಿರ್ಜಾನ ಹೈಸ್ಕೂಲ್ ಶಿಕ್ಷಕಿ ಭಾರತಿ ಹೆಗಡೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ವಿದ್ಯಾರ್ಥಿ ಕಾವ್ಯ ಸಂಗಡಿಗರು ಸ್ವಾಗತಗೀತೆ ಹಾಡಿದರು. ಮುಖ್ಯಾಧ್ಯಾಪಕಿ ಪದ್ಮಾ ನಾಯಕ ಸರ್ವರನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಮಂಗಲಾ. ಎನ್ .ನಾಯಕ ಕಾರ್ಯಕ್ರಮ ನಿರೂಪಣೆ ಮಾಡಿದರು, ಶ್ಯಾಮಲಾ ನಾಯಕ ವಂದಿಸಿದರು.

ನಾಡುಮಾಸ್ಕೇರಿ ಹೈಸ್ಕೂಲ್ ಶಿಕ್ಷಕರಾದ ಶ್ರೀಧರ. ನಾಯಕ, ಸಿ.ಡಿ.ನಾಯ್ಕ, ಸರೋಜ ನಾಯಕ, ಜೆ.ಕೆ.ಗೌಡ, ಮಾದೇವಿ ಗೌಡ, ಅವಿನಾಶ ಗಾವಡಿ, ಅಂಕೋಲಾ ಬಿ..ಇಡಿ ಪ್ರಶಿಕ್ಷಣಾರ್ಥಿಗಳು ಗೊಕರ್ಣ ವಲಯದ ಪ್ರೌಢಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು, ನಿರ್ಣಾಯಕರು ಊರ ನಾಗರಿಕರು ಭಾಗವಹಿಸಿದ್ದರು. ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿದರು.

ವರದಿ:ಎನ್.ರಾಮು.ಹಿರೇಗುತ್ತಿ