Home Local ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆ ಚುನಾವಣೆ : ಪೋಲೀಸ್ ಬಿಗಿ ಬಂದೋ ಬಸ್ತ: ಶಾಂತಿಯುತ ಮಾತದಾನ

ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆ ಚುನಾವಣೆ : ಪೋಲೀಸ್ ಬಿಗಿ ಬಂದೋ ಬಸ್ತ: ಶಾಂತಿಯುತ ಮಾತದಾನ

SHARE

ಕುಮಟಾ :ಕಾರವಾರ, ಶಿರಸಿ, ದಾಂಡೇಲಿ ನಗರಸಭೆ, ಅಂಕೋಲಾ, ಕುಮಟಾ, ಹಳಿಯಾಳ ಪುರಸಭೆ ಹಾಗೂ ಯಲ್ಲಾಪುರ ಮತ್ತು ಮುಂಡಗೋಡ ಪಟ್ಟಣ ಪಂಚಾಯತಿಗಳಲ್ಲಿ ಇಂದು ಸ್ಥಳೀಯ ಸಂದ್ಥೆಗಳ ಚುನಾವಣೆ ನಡೆಯುತ್ತಿದೆ.

ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನವು ಬೆಳಿಗ್ಗೆ 7ರಿಂದ ಆರಂಭಗೊಂಡಿದ್ದು, ಎಲ್ಲೆಡೆ ಶಾಂತಿಯುತವಾಗಿ ನಡೆಯುತ್ತಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹಾಗೂ ಶಾಂತಿಯುತ ಮತದಾನ ನಡೆಸಲು ಪೋಲೀಸ್ ಇಲಾಖೆ ಬಿಗಿ ಬಂದೋಬಸ್ತ ಕಲ್ಪಿಸಿದೆ.

ಜಿಲ್ಲೆಯ 250 ವಾರ್ಡ್ ಗಳಿಗೆ 753 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ 198, ಕಾಂಗ್ರೆಸ್ ನಿಂದ 194, ಜೆಡಿಎಸ್ ನಿಂದ 145, 216 ಪಕ್ಷೇತರರು ಕಣದಲ್ಲಿದ್ದಾರೆ.


ಒಟ್ಟು 258 ಮತಗಟ್ಟೆಗಳಿಗೆ 258 ಮತಯಂತ್ರಗಳನ್ನು ನೀಡಲಾಗಿದ್ದು, ಪ್ರತಿ ಮತಗಟ್ಟೆಗಳಲ್ಲಿ ತಲಾ ಒಬ್ಬರು ಪಿ.ಆರ್.ಒ, ಎ.ಪಿ.ಆರ್.ಒ, ‘ಡಿ’ ದರ್ಜೆ ಸಿಬ್ಬಂದಿ ಹಾಗೂ ಇಬ್ಬರು ಬಿಒಗಳು ಮತದಾನದ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ  ಬಳಕೆ ಮಾಡಲಾಗುತ್ತಿದ್ದು, ಇದರಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಭಾವಚಿತ್ರ ನೀಡಲಾಗಿದೆ. ಈ ಬಾರಿ ‘ನೋಟಾ’ವನ್ನೂ ಬಳಸಲು ಅವಕಾಶ ನೀಡಲಾಗಿದೆ.