Home Important ಪೊಲೀಸರ ಮನೆಗೆ ನುಗ್ಗಿ 9 ಮಂದಿ ಅಪಹರಣ : ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ.

ಪೊಲೀಸರ ಮನೆಗೆ ನುಗ್ಗಿ 9 ಮಂದಿ ಅಪಹರಣ : ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ.

SHARE

ಶ್ರೀನಗರ: ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದು, ಪೊಲೀಸರ ಮನೆಗಳಿಗೆ ನುಗ್ಗಿ 9 ಮಂದಿಯನ್ನು ಅಪಹರಣ ಮಾಡಿದ್ದಾರೆ, ಅಲ್ಲದೇ ಭದ್ರತಾ ಪಡೆಗಳಿಗೆ ಸವಾಲು ಹಾಕಿದ್ದಾರೆ ಎನ್ನಲಾಗಿದೆ.

ಕುಲ್ಗಾಮ್, ಅನಂತ್ ನಾಗ್ ಮತ್ತು ಅವಂತಿಪೋರಾದಲ್ಲಿರುವ ಪೊಲೀಸರ ಮನೆಗಳಿಗೆ ಗುರುವಾರ ರಾತ್ರಿ ನುಗ್ಗಿರುವ ಉಗ್ರರು 9 ಮಂದಿಯನ್ನು ಅಪಹರಣ ಮಾಡಿದ್ದಾರೆಂದು ತಿಳಿದುಬಂದಿದೆ.

ದಕ್ಷಿಣ ಕಾಶ್ಮೀರ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ನಾಲ್ವರು ಪೊಲೀಸರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಉಗ್ರರ ಮನೆಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೆ, ಅವರ ಸಂಬಂಧಿಕರನ್ನು ಬಂಧನಕ್ಕೊಳಪಡಿಸಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇದೀಗ ಉಗ್ರರು ಪೊಲೀಸರು ಹಾಗೂ ಅವರ ಸಂಬಂಧಿಕರನ್ನು ಅಪಹರಣ ಮಾಡಿದ್ದಾರೆಂದು ವರದಿಯಾಗಿದೆ.